ಅಜ್ಞಾತ ರೋಗ ಬಾಧಿಸಿ ಕೊನೆಯುಸಿರೆಳೆಯುತ್ತಿರುವ ಆಡುಗಳು

9:21 PM, Tuesday, March 8th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
goat died

ಕುಂಬಳೆ: ಕುಂಬಳೆ ಸಹಿತ ಸುತ್ತುಮುತ್ತಲಿನ ಹಲವೆಡೆಗಳಲ್ಲಿ ಆಡುಗಳಿಗೆ ಬಾಧಿಸುತ್ತಿರುವ ಆತಂಕಾರಿ ರೋಗದಿಂದ ನೂರಾರು ಆಡುಗಳು ಈಗಾಗಲೇ ಮೃತಪಟ್ಟಿದ್ದು, ಆಡು ಸಾಕಾಣಿಕೆದಾರರನ್ನು ತೀವ್ರ ಭೀತಗೊಳಿಸಿದೆ.

ಆರಿಕ್ಕಾಡಿ ಬಳಿಯ ಬನ್ನಂಕುಳದ ಮೊಯ್ದೀನ್ ಕುಂಞಿ ಎಂಬವರ ಆಡುಸಾಕಾಣೆ ಪಾರ್ಮ್‌ನ55 ಆಡುಗಳ ಪೈಕಿ 27 ಆಡುಗಳು ರೋಗ ತಗಲಿ ಮೃತಪಟ್ಟಿವೆ.ಜೊತೆಗೆ ಇತರ 15 ಆಡುಗಳಿಗೂ ರೋಗ ತಗಲಿದೆ.ಇದೇ ಪರಿಸರದ ಪಿ.ಕೆ.ನಗರ್ ತಂಙಳ್ ಮನೆಯ ಏಳು ಆಡುಗಳು,ಫಾತಿಮಾ ಎಂಬವರ 4 ಆಡುಗಳು,ಇಬ್ರಾಹಿಂ ಎಂಬವರ 10 ಆಡುಗಳು,ಕಂಚಿಕಟ್ಟೆ ಹನೀಫಾ ಎಂಬವರ 7, ಪೂಕಟ್ಟೆ ಇಬ್ರಾಹಿಂ ಎಂಬವರ 2 ಸಹಿತ 50ರಷ್ಟು ಮನೆಗಳ ನೂರರಷ್ಟು ಆಡುಗಳು ಅನಾಮಧೇಯ ರೋಗಕ್ಕೆ ಬಲಿಯಾಗಿವೆ.

ರೋಗ ತಗಲಿದ ಆಡುಗಳನ್ನು ಮೃಗಾಸ್ಪತ್ರೆಗೆ ಒಯದು ಸಪಾಸಣೆ ನಡೆಸುತ್ತಿದ್ದರೂ ಯಾವ ರೋಗ ತಗಲಿದೆಯೆಂಬುದನ್ನು ಈ ವರೆಗೆ ಪತ್ತೆಹಚ್ಚಲಾಗಲಿಲ್ಲ.ಇದರಿಂದ ಅಗತ್ಯ ಮದ್ದುಗಳೂ ಲಭ್ಯವಾಗುತ್ತಿಲ್ಲ.

ನ್ಯೂಮೋನಿಯಾದಂತೆ ಮೊದಲಿಗೆ ಜ್ವರ ಕಂಡುಬಂದು ಆಡುಗಳು ಒಂದೆರಡು ದಿನದಲ್ಲಿ ಮರಣಹೊಂದುತ್ತಿವೆ.

ಜಿಲ್ಲೆಯ ಹಲವೆಡೆಗಳ ಮೃಗಾಸ್ಪತ್ರೆಗಳಲ್ಲಿ ತೀವ್ರ ವೈದ್ಯರ ಕೊರತೆಯಿದ್ದು ಈ ಕಾರಣಗಳಿಂದ ಹೆಚ್ಚಿನ ಚಿಕಿತ್ಸೆಗಳಿಗೆ ವೈದ್ಯರು ಲಭ್ಯವಾಗುತ್ತಿಲ್ಲ.

ಡಾ.ಜಯಕುಮಾರ್
ಜಿಲ್ಲಾಪಶುವೈದ್ಯಕೀಯ ಮುಖ್ಯಸ್ಥ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English