ಗ್ರಾಮೀಣ ಬ್ಯಾಂಕ್‌ನ ಗ್ರಾಹಕರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ ಮೊತ್ತ ಹಸ್ತಾಂತರ

12:00 AM, Friday, March 11th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Vime

ಪೆರ್ಲ: ಕೇಂದ್ರ ಸರಕಾರ ವಿವಿಧ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕಾಸರಗೋಡು ಜಿಲ್ಲೆಯ ಕುಗ್ರಾಮಗಳಿಗೆ ಅದು ತಲುಪುತ್ತಿಲ್ಲ. ಕಾರಣ ಇಲ್ಲಿನ ಜನತೆಗೆ ಅದರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ಸರಕಾರದ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ ಎಂದು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಹೇಳಿದರು.

ಅವರು ಗ್ರಾಮೀಣ ಬ್ಯಾಂಕ್‌ನ ವಾಣೀನಗರ ಶಾಖೆ ಆಯೋಜಿಸಿದ ಗ್ರಾಹಕ ಸಮಾವೇಶ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ ಪರಿಹಾರ ಧನ ಹಸ್ತಾಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇತ್ತೀಚೆಗೆ ನಿಧನರಾದ ನಾರಾಯಣ ಪಿಲಿಂಗಲ್ಲು ಅವರಿಗೆ ಪಿಎಂಜೆಜೆವೈ ವಿಮೆಯ ಮೊತ್ತವಾದ ಎರಡು ಲಕ್ಷ ರೂ.ಯನ್ನು ದಿವಂಗತರ ಪತ್ನಿ ದೇವಕಿ ಅವರು ಸ್ವೀಕರಿಸಿದರು.

ಬ್ಯಾಂಕಿನ ವಿಭಾಗೀಯ ಪ್ರಬಂಧಕ ಕೆ.ಎಂ.ಬಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ವಾಣಿನಗರದಲ್ಲಿ ಜರಗಿದ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪ್ರಗತಿಪರ ಕೃಷಿಕ ರಮಾನಂದ ಎಡಮಲೆ ಅವರು ಮಾತನಾಡಿ ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳು ಮಧ್ಯವರ್ತಿಯ ಪಾತ್ರ ನಿರ್ವಹಿಸುತ್ತವೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಗ್ರಾ.ಪಂ ಸದಸ್ಯೆ ಮಲ್ಲಿಕಾ ರೈ, ಶಶಿಕಲಾ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಕೃಷ್ಣ ಕುಮಾರ್, ರಾಮಚಂದ್ರ ಭಟ್ ಖಂಡೇರಿ ಮೊದಲಾದವರು ಶುಭಹಾರೈಸಿದರು.

ಶ್ರೀಕೃಷ್ಣ ಭಟ್, ಲಕ್ಷ್ಮಿ, ಶಾರದ, ಸುಕುಮಾರ, ಸಂತೋಷ್ ಕುಮಾರ್, ಅಶ್ವಿನ್ ಅರವಿಂದ, ಮೊಹಮ್ಮದ್ ಕುಂಞಿ, ಅಬ್ದುಲ್ಲ ಮುಂತಾದವರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕ ಶಿವರಾಮ ಮಣಿಯಾಣಿ ಸ್ವಾಗತಿಸಿ, ಉಪಪ್ರಬಂಧಕ ಸಚಿನ್ ಸಿ.ಎಸ್. ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English