ಪೈವಳಿಕೆ ಗ್ರಾ.ಪಂ ಬಜೆಟ್ : ಕೃಷಿಕರ ಅವಗಣನೆ

11:53 PM, Friday, March 11th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
subrahmanya bhat

ಉಪ್ಪಳ: ಪೈವಳಿಕೆ ಗ್ರಾ. ಪಂ ಬಜೆಟ್ ವಾರದ ಹಿಂದೆ ಮಂಡನೆಯಾಗಿದ್ದು, ಕೃಷಿ ಕ್ಷೇತ್ರವನ್ನು ಸಂಪೂರ್ಣ ಅವಗಣಿಸಲಾಗಿದೆ. ವಾರ್ಡ್‌ವೊಂದಕ್ಕೆ ಎರಡೂವರೆ ಲಕ್ಷ ರೂಪಾಯಿಗಳಂತಿರಿಸಿದ ಹಣವೂ ಕೃಷಿ ಅಭಿವೃದ್ಧಿಗೆ ಕಿಂಚಿತ್ತೂ ಸಾಲದು ಎಂದು ಪೈವಳಿಕೆ ಗ್ರಾ. ಪಂ ಸದಸ್ಯ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಹೇಳಿದ್ದಾರೆ.

72.2 ಚದರ ಕಿ.ಮೀ ವಿಸ್ತೀರ್ಣವಿರುವ ಮಂಜೇಶ್ವರ ತಾಲೂಕಿನ ದೊಡ್ಡ ಪಂಚಾಯತ್ ಹೆಗ್ಗಳಿಕೆಯ ಪೈವಳಿಕೆಯಲ್ಲಿ 70% ಕೃಷಿಕರು ಮತ್ತು ಕೃಷಿ ಕಾರ್ಮಿಕರಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕೃಷಿ ಕಾರ್ಮಿಕರಿಗೆ ಹಾಗೂ ಸಣ್ಣ ಹಿಡುವಳಿದಾರರಿಗೆ ಬಜೆಟ್‌ನಲ್ಲಿ ತೆಗೆದಿರಿಸಿರುವ ಮೊತ್ತ ಸಾಲದು. ಕೇವಲ ಟಿಲ್ಲರ್ ಹಾಗೂ ಇತರೆ ಕೃಷಿ ಯಂತ್ರದ ಸಲಕರಣೆ ಕೊಳ್ಳಲು ಒಂದೂವರೆ ಲಕ್ಷ ವ್ಯಯಿಸಬೇಕು. ಕೃಷಿಗೆ ಪೂರಕವಾಗಿರುವ ನೀರಾವರಿ, ಉತ್ತಮ ಮಾರುಕಟ್ಟೆ ನಿರ್ಮಾಣ, ತಂತ್ರಜ್ಞಾನ, ಕೃಷಿಪರಿಕರ ಅಳವಡಿಕೆ ಬೆಳೆ ವಿಮಾ ಯೋಜನೆಯ ಕೊಡಮಾಡಲು ಬಜೆಟ್ ಪೂರಕವಾಗಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ವಲಯದ ಉತ್ತೇಜನಕ್ಕೆ ಪ್ರೋತ್ಸಾಹಿಸುತ್ತದೆ, ಆದರೆ ಪಂಚಾಯತ್ ಕೃಷಿ ಕ್ಷೇತ್ರವನ್ನು ಸಂಪೂರ್ಣ ಅವಗಣಿಸಿದೆ, ಹೀಗಾದಲ್ಲಿಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ನಿಲುವಿಗೆ ಅಡ್ಡಗಾಲಾಗುತ್ತದೆ ಎಂದು ಹೇಳಿದ್ದಾರೆ. ಬಜೆಟ್ ಕೃಷಿ ಸ್ನೇಹಿಯಾಗಿರಬೇಕು, ದೇಶದ ಬೆನ್ನೆಲುಬಾದ ಕೃಷಿಗೆ ನರೇಗಾಕ್ಷೇತ್ರದಿಂದ ಸಹಾಯ ಪಡೆಯುವಂತಾಗಬೇಕು.ಕಂಗಲಾದ ರೈತರಿಗೆ ಭರವಸೆಯ ಆಶಾಕಿರಣವಾಗಿ, ಕೃಷಿಯಿಂದ ಮಿಮುಖವಾಗುತ್ತಿರುವ ಯುವಜನಾಂಗವನ್ನು ಕೃಷಿ ಕ್ಷೇತ್ರದಲ್ಲಿ ತೊಡಗುವಂತೆ ಉತ್ತೇಜಿಸಬೇಕೆಂದು ಸುಬ್ರಹ್ಮಣ್ಯ ಭಟ್ ಹೇಳಿದರು.ಅದಷ್ಟು ಬೇಗ ಸೋಯಿಲ್ ಹೆಲ್ತ್‌ಕಾರ್ಡ್(ಮಣ್ಣಿನಗುಣಮಟ್ಟ ಪರೀಕ್ಷಾಕಾರ್ಡ್) ಜಾರಿಗೆತಂದು ಆ ಮೂಲಕ ಕುಂಠಿತವಾಗುತ್ತಿರುವ ಕೃಷಿ ಕ್ಷೇತ್ರವನ್ನು ಪುನಶ್ಚೇತನಗೊಳಿಸುವ ಜವಬ್ದಾರಿ ಎಲ್ಲಾ ಪಂಚಾಯತ್ ಸದಸ್ಯರಿಗಿದೆ ಎಂದು ಹೇಳಿದ್ದಾರೆ.

ಡಾ ಪಿ. ಪ್ರಭಾಕರನ್ ಕಾಸರಗೋಡು ಅಭಿವೃದ್ಧಿ ವರದಿಯಲ್ಲಿ ಕೃಷಿ ವಲಯಕ್ಕೂ ಸೂಕ್ತ ಕ್ರಮ ಅಳವಡಿಸಬೇಕೆಂದಿದೆ.ಆದರೆ ಜ್ಯಾರಿಗೊಳಿಸಬೇಕಾದ ಯೋಜನೆ, ನೀರಾವರಿ ಸೌಕರ್ಯಗಳ ಬಗ್ಗೆ ಕೂಲಂಕುಶವಾಗಿ ಉಲ್ಲೇಖಿಸಲಾಗಿದ್ದು ಶೀಘ್ರವೇ ಕೇಂದ್ರ, ರಾಜ್ಯ ಸರಕಾರಗಳು ಪಂಚಾಯತ್ ಮಟ್ಟದಿಂದಲೇ ಕೃಷಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು ಎಂದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English