ಬಿಜೆಪಿ ಮಂಜೇಶ್ವರ ಮಂಡಲ ಚುನಾವಣಾ ಸಮಿತಿ ಕಛೇರಿ ಉದ್ಘಾಟನೆ

9:23 PM, Friday, March 18th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
Bjp Manjeshwara

ಉಪ್ಪಳ : ದೇಶ ಕಾತರತೆಯಿಂದ ಈ ಸಾಲಿನ ಕೇರಳದ ವಿಧಾನ ಸಭಾ ಚುನಾವಣೆಯನ್ನು ಕಾಯುತ್ತಿದೆ. ರಾಜ್ಯದ ಜನತೆಯ ಸಹಿತ ಪ್ರತಿಯೊಬ್ಬರ ದೃಷ್ಟಿಯು ಚುನಾವಣೆಯತ್ತ ಹಾಯಿಸುವಂತಾಗಿದೆ. ಇದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಜನರಪರ ಆಡಳಿತವೇ ಕಾರಣ ಎಂಬುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿ ಯಾವ ಕಾಲಕ್ಕೂ ಜನಪರ ಹೋರಾಟದ ಹಾದಿಗೆ ದನಿಯಾದ ಪಕ್ಷವಾಗಿದೆ. ಅಲ್ಲದೆ ಭಾರತೀಯ ಜನ ಸಂಘದ ಕಾಲದಿಂದಲೂ ಮಂಜೇಶ್ವರ ಮಂಡಲ ಪ್ರತಿಭಟನೆ, ಹೋರಾಟಗಳಿಗೆ ಸಾಕ್ಷಿ ಎನಿಸಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಸಿ.ಕೆ.ಪದ್ಮನಾಭನ್ ಅವರು ಅಭಿಪ್ರಾಯಪಟ್ಟರು.

ಅವರು ಮೇ.16ರಂದು ಕೇರಳದಲ್ಲಿ ನಡೆಯಲಿರುವ ವಿಧಾಸಭಾ ಚುನಾವಣೆಯ ಪ್ರಯುಕ್ತ ಮಂಜೇಶ್ವರ ಮಂಡಲ ಚುನಾವಣಾ ಸಮಿತಿ ಕಛೇರಿಯನ್ನು ಮಂಗಲ್ಪಾಡಿ ಸಮೀಪದ ಮಲ್ಲಂಗೈ ಎಂಬಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಳೆದ ಆರು ದಶಕಗಳಲ್ಲಿ ಯುಡಿಎಫ್ ಎಲ್‌ಡಿಎಫ್ ದುರಾಡಳಿತದಿಂದ ಕೇರಳ ರಾಜ್ಯ ದೇಶ ವಿರೋಧಿ ಚಟುವಟಿಕೆಗಳ ಕೇಂದ್ರವಾಗುತ್ತಿರುವುದು ದುರಂತ. ಮುಂದೆಯೂ ಇದು ವಿಸ್ತಾರಗೊಳ್ಳದಂತೆ ತಡೆ ಹಿಡಿಯಬೇಕಾಗಿದೆ. ಪಕ್ಷ ಈ ಬಗ್ಗೆ ಶ್ರಮ ವಹಿಸಲಿದೆ ಎಂದು ಅವರು ತಿಳಿಸಿದರು.

ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಭಾಗವಹಿಸಿ ಮಾತನಾಡಿ, ಮಂಜೇಶ್ವರದಿಂದ ತಿರುವನಂತಪುರದವರೆಗೂ ಪಕ್ಷದ ಯಶಸ್ಸಿನ ಅಲೆಯುಂಟಾಗಿದೆ. ಕೇರಳದ ಪ್ರತಿ ಮತದಾರ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಬಹುದು ಎಂಬ ಭರವಸೆಯೊಂದು ಕಾಣುವಂತಾಗಿದೆ. ಇದರೊಂದಿಗೆ ಗೆಲುವಿಗಾಗಿ ಪರಿಶ್ರಮವೂ ಕಾರ್ಯಕರ್ತರಿಂದ ಆರಂಭಗೊಂಡಿದೆ. ಮಂಜೇಶ್ವರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷದ ನಾಯಕ ಕೆ.ಸುರೇಂದ್ರನ್ ಅವರು ಯಾವುದೇ ರೀತಿಯ ಅಡ್ಜಸ್ಟೆಮೆಂಟ್ ಮತ್ತು ಭಷ್ಟಾಚಾರ ರಾಜಕೀಯನ್ನು ಮಾಡದ ವ್ಯಕ್ತಿಯಾಗಿದ್ದಾರೆ. ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಜಿಲ್ಲಾಧ್ಯಕ್ಷ ಸುರೇಶ್‌ಕುಮಾರ್ ಶೆಟ್ಟಿ ಪೂಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್, ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ, ಹಿರಿಯ ಬಿಜೆಪಿ ನೇತಾರ ಬಾಬು ರೈ ಪರಂಕಿಲ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English