ಹಿಂದೂ ಯುವಕರ ಮೇಲೆ ನಿರಂತರ ಹಲ್ಲೆಗೆ ಖಂಡನೆ

9:02 PM, Saturday, March 19th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Hindu Activist

ಕುಂಬಳೆ: ಹಿಂದೂ ಯುವಕರ ಮೇಲೆ ಅನ್ಯಾಯವಾಗಿ ಹಲ್ಲೆ ನಡೆಸುತ್ತಿರುವುದು ನಿತ್ಯ ಘಟನೆಗಳಾಗುತ್ತಿದ್ದರೂ ಪೋಲೀಸರು ಹಲ್ಲೆಕೋರರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಕೋಮುವಾದ ದೃಷ್ಟಿಯಲ್ಲಿ ರಾಜಕೀಯ ಪ್ರೇರಿತರಾಗಿ ಕಾರ್ಯ ನಿರ್ವಹಿಸುತ್ತಿರುವುದು ಖಂಡನೀಯ. ಈ ಬಗ್ಗೆ ಪೋಲೀಸರು ನ್ಯಾಯಯುತ ನಿಷ್ಪಕ್ಷ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿಬಿನ್ ತೃಕ್ಕರಿಪುರ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂಬಳೆ-ಆರಿಕ್ಕಾಡಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಿಂದೂ ಯುವಕರ ಮೇಲೆ ಆಕ್ರಮಣ ನಡೆಸುವ ಮೂಲಕ ಮತೀಯ ಸಂಘರ್ಷ ಸೃಷ್ಟಿಸಲು ಯತ್ನಿಸುವ ಮೂಲಭೂತವಾದಿಗಳ ವಿರುದ್ದ ಆರಕ್ಷರು ತೋರಿಸುತ್ತಿರುವ ಮೃದು ಧೋರಣೆಯನನು ಖಂಡಿಸಿ ಕುಂಬಳೆ ಸಿಐ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಹಮ್ಮಿಕೊಂಡ ಬೃಹತ್ ಮಾರ್ಚ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೋಮುವಾದದ ಹೆಸರಲ್ಲಿ ತುಷ್ಟೀಕರಣ ನೀತಿ ಸಲ್ಲದು.ರಾಜಕೀಯ ಪ್ರೇರಿತರಾಗಿ ಏನೂ ಮಾಡಬಹುದೆಂಬ ಹುಂಬತನ ಮತ್ತು ಪೋಲೀಸರ ಪರೋಕ್ಷ ಬೆಂಬಲ ಸಮಾಜವನ್ನು ಕ್ಲಿಷ್ಟಕರ ಅವಸ್ಥೆಗೆ ಕೊಂಡೊಯ್ಯುತ್ತಿದೆ.ಪೋಲೀಸರು ನ್ಯಾಯಯುತ ಮಾರ್ಗ ಅನುಸರಿಸದಿದ್ದರೆ ಹಿಂದೂಗಳ ರಕ್ಷಣೆಗೆ ಹುಟ್ಟಿಕೊಂಡು ಕಾರ್ಯಾಚರಿಸುತ್ತಿರುವ ಐಕ್ಯವೇದಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗುತ್ತದೆಯೆಂದು ಎಚ್ಚರಿಸಿದರು.

ಐಕ್ಯವೇದಿಯ ತಾಲೂಕು ಕಾರ್ಯಾಧ್ಯಕ್ಷ ವೇಣುಗೋಪಾಲ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.ರಘುರಾಮ ಕಾಳ್ಯಂಗಾಡ್, ಜಿಲ್ಲಾ ಕಾರ್ಯದರ್ಶಿ ಸುಜಾತಾ ಆರ್ ತಂತ್ರಿ,ಮಂಜೇಶ್ವರ ತಾಲೂಕು ಅಧ್ಯಕ್ಷ ಸುಮಿತ್ ಪೆರ್ಲ,ದಿನೇಶ್ ಆಚಾರ್ಯ ಆರಿಕ್ಕಾಡಿ,ಸುರೇಶ್ ಶಾಂತಿಪಳ್ಳ,ಪ್ರಭಾಕರ ಕುಂಬಳೆ,ದಿನೇಶ್ ಮೊದಲಾದವರು ಮಾರ್ಚ್‌ನ ನೇತೃತ್ವ ವಹಿಸಿದ್ದರು.ಸಂಘಟನಾ ಕಾರ್ಯದರ್ಶಿ ಸಂದೀಪ್ ಗಟ್ಟಿ ಸ್ವಾಗತಿಸಿ,ದಿನೇಶ್ ಆಚಾರ್ಯ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English