ಮಂಗಳೂರು: ದ.ಕ ಜಿಲ್ಲಾ ಬಿಜೆಪಿ ಇಂದು ಬೆಳಿಗ್ಗೆ ಚನ್ನಪಟ್ಟಣ, ಜಗಳೂರು, ಬಂಗಾರಪೇಟೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿತು.
ಜಿಲ್ಲಾ ಬಿಜೆಪಿಯ ನಗರಾಧ್ಯಕ್ಷ ಶ್ರೀಕರ ಪ್ರಭು ಕಾರ್ಯಕರ್ತರಿಗೆ ಹಾಗೂ ಮನಪಾ ಮೇಯರ್ ಪ್ರವೀಣ್ ಅಂಚನ್ರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಬಳಿಕ ಕಾರ್ಯಕರ್ತರು ಬಿಜೆಪಿ ಪತಾಕೆಗಳನ್ನು ಹಿಡಿದು ನವಭಾರತ ಸರ್ಕಲ್ ವರೆಗೆ ವಿಜಯೋತ್ಸವ ಜಾಥಾ ನಡೆಸಿದರು.
ವಿಜಯೋತ್ಸವದಲ್ಲಿ ಶ್ರೀಕರ ಪ್ರಭು ಮಂಗಳೂರು, ಮೇಯರ್ ಪ್ರವೀಣ್ ಅಂಚನ್, ಫಿಶರೀಶ್ ಫೆಡರೇಶನ್ನಿನ ನಿತಿನ್ ಕುಮಾರ್ ಬೋಳಾರ್, ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಬಿಜೆಪಿ ಮುಖಂಡ ಮಾಧವ ಭಂಡಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English