ದೃಢ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ- ಕಾಣಿಯೂರು ಶ್ರೀ

11:00 PM, Sunday, April 3rd, 2016
Share
1 Star2 Stars3 Stars4 Stars5 Stars
(5 rating, 6 votes)
Loading...

Kaniyooru seer

ಮುಳ್ಳೇರಿಯ: ದೃಢ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಗವಂತ ಸರ್ವವ್ಯಾಪಿ. ದೇವರ ಬಗ್ಗೆ ನಂಬಿಕೆ, ಆತ್ಮ ವಿಶ್ವಾಸ, ಭಕ್ತಿ-ಶ್ರದ್ಧೆಯಿಂದಾಗಿ ಭಗವಂತ ನಮಗೆ ಒಲಿಯುತ್ತಾನೆ. ನಮ್ಮಲ್ಲಿರುವ ದೇವರ ಇರುವಿಕೆಯ ಬಗೆಗಿನ ಗೊಂದಲದಿಂದಾಗಿ ನಮಗೆ ಪರಿಪೂರ್ಣ ಫಲ ಲಭಿಸಲಾರದು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಹೇಳಿದರು.

ಅವರು ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋದ ಎಜಿಎಂ ರವೀಶ.ಎಂ ,ಜೀವವಿಮಾ ನಿಗಮದ ಹಿರಿಯ ಅಭಿವೃದ್ದಿ ಅಧಿಕಾರಿ ವಾಮನ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪುರೋಹಿತರಾದ ಗುರುರಾಜ ಭಟ್ ಕುಂಟಾರು, ಚಾಕರಿಕಾರರಾದ ಕೆ.ವಿ.ಚಂದು ಮತ್ತು ಅಪ್ಪು ಪಾಟಾಳಿ ಇವರನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಸನ್ಮಾನಿಸಿದರು. ಗುರುರಾಜ ತಂತ್ರಿ, ಶುಭಲಕ್ಷ್ಮಿ ಗುಲಗುಂಜಿ, ದಿಲೀಪ ಸನ್ಮಾನ ಪತ್ರ ವಾಚಿಸಿದರು. ಕಾರಡ್ಕ ಗ್ರಾಮ ಪಂಚಾಯತ್ ಸದಸ್ಯೆ ಶ್ರೀವಿದ್ಯಾ, ಗೋಪಾಲಕೃಷ್ಣ ಭಟ್ ಕಡುಮನೆ, ದಾಮೋದರ ಮಾಟೆ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿ ಆಕರ್ಷ್ ಭಟ್ ರನ್ನು ಅಭಿನಂದಿಸಲಾಯಿತು. ಪರಿವರ್ತನಾ ಬಳಗದ ರಸಪ್ರಶ್ನೆಯಲ್ಲಿ ಬಹುಮಾನ ಪಡೆದ ವಿಶ್ವಾಸ್.ಜಿ.ಎಸ್ ಗುಲಗುಂಜಿ, ಆಕಾಶ್.ಜಿ.ಚಂಬಲ್ತಿಮಾರ್, ಅಪೂರ್ವ ಎಡಕ್ಕಾನ ಮತ್ತು ನಾರಾಯಣ ಪ್ರಸಾದ್ ಶರ್ಮ ಇವರಿಗೆ ಬಹುಮಾನ ವಿತರಣೆ ನಡೆಯಿತು.

ಕುಂಟಾರು ಅಯ್ಯಪ್ಪ ಮಂದಿರದ ಜೀರ್ಣೋದ್ಧಾರ ಕಾಮಗಾರಿಗಳ ಯಶಸ್ವಿಗಾಗಿ ತಯಾರಿಸಿದ ಕೂಪನ್ ಬಿಡುಗಡೆ ನಡೆಯಿತು.

ಬ್ರಹ್ಮಶ್ರೀ ರವೀಶ ತಂತ್ರಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಕಾಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಭಟ್ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ರಂಗಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಯ್ಯಳ ಶ್ರೀ ಸತ್ಯನಾರಾಯಣ ಭಜನಾ ಸಂಘದವರಿಂದ ನೃತ್ಯ ಭಜನೆ, ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇವರಿಂದ ಯಕ್ಷಗಾನ ಬಯಲಾಟ ರಾಜಹಂಸ ವಿಜಯ ನಡೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English