ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಕಾಂಕ್ರೀಟ್ ಕುಸಿದು ಸಿಮೆಂಟ್ ಗಳು ಎದ್ದು ದೊಡ್ಡ ದೊಡ್ಡ ಕಲ್ಲುಗಳು ಬೀಳಲು ಆರಂಭಿಸಿರುವುದು ಇಲ್ಲಿಯ ಪ್ರಯಾಣಿಕರಲ್ಲಿ ಆತಂಕ ಹಾಗೂ ಭಯವನ್ನು ಸೃಷ್ಟಿಸಿದೆ.
250 ಮೀಟರ್ ಉದ್ದವಿರುವ ಫ್ಲಾಟ್ ಫರಂ ನ ಮೂರು ಕಡೆಗಳಲ್ಲಿ ಕಾಂಕ್ರೀಟ್ ಕುಸಿದು ದೊಡ್ದ ಗಾತ್ರದ ಕಲ್ಲುಗಳು ಬೀಳಲಾರಂಭಿಸಿರುವುದರಿಂದ ಪ್ರಯಾಣಿಕರು ಭಯದಿಂದ ಫ್ಲಾಟ್ ಫಾರಮ್ ನ್ನು ಪ್ರವೇಶಿಸುವಂತಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇಂತಹ ಭೀತಿಯ ವಾತಾವರಣವಿದ್ದರೂ ಅಧಿಕೃತರು ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ ಪ್ರಯಾಣಿಕರು ದೂರುತಿದ್ದಾರೆ.
ದಿನನಿತ್ಯ ನೂರಾರು ಪ್ರಯಾಣಿಕರು ಈ ನಿಲ್ದಾಣದ ಮೂಲಕ ವಿವಿಧೆಡೆಗಳಿಗೆ ಪ್ರಯಾಣಿಸುತ್ತಾರೆ .
ಬಂದ್ಯೋಡು,ಕಳತ್ತೂರು,ಸಿರಿಯಾ,ಆರಿಕ್ಕಾಡಿ,ಪುತ್ತಿಗೆ,ಪೆರ್ಲ,ಬದಿಯಡ್ಕ,ನೀರ್ಚಾಲು ಸಹಿತ ಹಲವು ಪ್ರದೇಶಗಳ ಮಂಗಳೂರು ಮತ್ತು ಕಣ್ಣೂರು ಭಾಗಗಳಿಗೆ ತೆರಳುವ ಅದೆಷ್ಟೋ ಪ್ರಯಾಣಿಕರು ಕುಂಬಳೆ ನಿಲ್ದಾಣವನ್ನು ಬಳಸುತ್ತಿದ್ದು,ಈ ಪೈಕಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಪಾಲು ಅತ್ಯಧಿಕ.ಈ ಹಿನ್ನೆಲೆಯಲ್ಲಿ ರೈಲ್ವೇ ನಿಲ್ದಾಣದಲ್ಲಿ ಫ್ಲಾಟ್ ಫಾರಂ ನಲ್ಲಿ ಕುಸಿದು ಬೀಳುತ್ತಿರುವ ಕಲ್ಲುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಇದೊಂದು ದುರಂತಕ್ಕೆ ದಾರಿಯಾಗಬಹುದಾಗಿ ಹಿರಿಯ ನಾಗರಿಕರ ಅಭಿಪ್ರಾಯ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಕುಂಬಳೆ ರೈಲ್ವೇ ಫ್ಲಾಟ್ ಫಾರಂ ನಲ್ಲಿ ಕಾಂಕ್ರಿಟ್ ಕುಸಿದು ಕಲ್ಲುಗಳು ಬೀಳುತ್ತಿವೆ: ಪ್ರಯಾಣಿಕರು ಆತಂಕದಲ್ಲಿ ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಕಾಂಕ್ರೀಟ್ ಕುಸಿದು ಸಿಮೆಂಟ್ ಗಳು ಎದ್ದು ದೊಡ್ಡ ದೊಡ್ಡ ಕಲ್ಲುಗಳು ಬೀಳಲು ಆರಂಭಿಸಿರುವುದು ಇಲ್ಲಿಯ ಪ್ರಯಾಣಿಕರಲ್ಲಿ ಆತಂಕ ಹಾಗೂ ಭಯವನ್ನು ಸೃಷ್ಟಿಸಿದೆ.
250 ಮೀಟರ್ ಉದ್ದವಿರುವ ಫ್ಲಾಟ್ ಫರಂ ನ ಮೂರು ಕಡೆಗಳಲ್ಲಿ ಕಾಂಕ್ರೀಟ್ ಕುಸಿದು ದೊಡ್ದ ಗಾತ್ರದ ಕಲ್ಲುಗಳು ಬೀಳಲಾರಂಭಿಸಿರುವುದರಿಂದ ಪ್ರಯಾಣಿಕರು ಭಯದಿಂದ ಫ್ಲಾಟ್ ಫಾರಮ್ ನ್ನು ಪ್ರವೇಶಿಸುವಂತಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇಂತಹ ಭೀತಿಯ ವಾತಾವರಣವಿದ್ದರೂ ಅಧಿಕೃತರು ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ ಪ್ರಯಾಣಿಕರು ದೂರುತಿದ್ದಾರೆ. ದಿನನಿತ್ಯ ನೂರಾರು ಪ್ರಯಾಣಿಕರು ಈ ನಿಲ್ದಾಣದ ಮೂಲಕ ವಿವಿಧೆಡೆಗಳಿಗೆ ಪ್ರಯಾಣಿಸುತ್ತಾರೆ.ಬಂದ್ಯೋಡು,ಕಳತ್ತೂರು,ಸಿರಿಯಾ,ಆರಿಕ್ಕಾಡಿ,ಪುತ್ತಿಗೆ,ಪೆರ್ಲ,ಬದಿಯಡ್ಕ,ನೀರ್ಚಾಲು ಸಹಿತ ಹಲವು ಪ್ರದೇಶಗಳ ಮಂಗಳೂರು ಮತ್ತು ಕಣ್ಣೂರು ಭಾಗಗಳಿಗೆ ತೆರಳುವ ಅದೆಷ್ಟೋ ಪ್ರಯಾಣಿಕರು ಕುಂಬಳೆ ನಿಲ್ದಾಣವನ್ನು ಬಳಸುತ್ತಿದ್ದು,ಈ ಪೈಕಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಪಾಲು ಅತ್ಯಧಿಕ. ಈ ಹಿನ್ನೆಲೆಯಲ್ಲಿ ರೈಲ್ವೇ ನಿಲ್ದಾಣದಲ್ಲಿ ಫ್ಲಾಟ್ ಫಾರಂ ನಲ್ಲಿ ಕುಸಿದು ಬೀಳುತ್ತಿರುವ ಕಲ್ಲುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಇದೊಂದು ದುರಂತಕ್ಕೆ ದಾರಿಯಾಗಬಹುದಾಗಿ ಹಿರಿಯ ನಾಗರಿಕರ ಅಭಿಪ್ರಾಯ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
Click this button or press Ctrl+G to toggle between Kannada and English