ತಂತ್ರಜ್ಞಾನಗಳ ಉಪಯೋಗವನ್ನು ಗರಿಷ್ಠಗಳಸಿ ಕೊಳ್ಳುವಲ್ಲಿ ಹಿಂದುಳಿಯಬಾರದು : ಡಾ.ಕೆ.ವಿ.ಆರ್.ಠಾಗೂರ್

9:15 PM, Wednesday, April 6th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Karnataka Janapada Parishad

ಕುಂಬಳೆ: ಶ್ರೇಷ್ಠ, ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಗಳಿರುವ ಭಾರತೀಯ ಪ್ರಾಚೀನ ಕಲೆಗಳ ದಾಖಲಾತಿಯಲ್ಲಿ ನಾವು ಹಿಂದುಳಿದಿದ್ದೇವೆ. ಇತಿಹಾಸದ ನನಹುಗಳಿಲ್ಲದೆ ಮುಂದಿನ ತಲೆಮಾರಿಗೆ ಕೃತಿ,ಸಾಧನೆಗಳ ಅರಿವು ಮೂಡಿಸಲು ದಾಖಲೀಕರಣಗಳ ಪ್ರಯತ್ನಗಳು ಇನ್ನಷ್ಟು ಆಗಬೇಕಿದೆಯೆಂದು ಕಾರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಕೆ.ವಿ.ಆರ್.ಠಾಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕೈಗೆತ್ತಿಕೊಂಡಿರುವ ಜಾನಪದ ಕಲೆ, ಕಲಾವಿದ ಹಾಗೂ ಪ್ರಾಚೀನ ಆಚರಣೆಗಳ ಪುಸ್ತಕ ಹಾಗೂ ಅಂತರ್ಜಾಲ ದಾಖಲೀಕರಣದ ಪೂರ್ವಭಾವೀ ಪರಿಚಯ ಪತ್ರವನ್ನು ಘಟಕದ ಕಾರ್ಯದರ್ಶಿ ಕೇಳು ಮಾಸ್ಟರ್ ಅಗಲ್ಪಾಡಿಯವರಿಗೆ ಕುಂಬಳೆಯಲ್ಲಿ ಸೋಮವಾರ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ಆಧುನಿಕ ಜನಾಂಗದ ಅರಿವಿನ ವಿಸ್ತಾರತೆಗೆ ಅನುವು ಮಾಡಿಕೊಡುವಲ್ಲಿ ಲಭ್ಯ ತಂತ್ರಜ್ಞಾನಗಳ ಉಪಯೋಗವನ್ನು ಗರಿಷ್ಠಗಳಸಿ ಕೊಳ್ಳುವಲ್ಲಿ ಹಿಂದುಳಿಯಬಾರದು. ಭೂತಕಾಲದ ಸ್ಪಷ್ಟ ಅರಿವಿನೊಂದಿಗೆ ಸುಂದರ ಬದುಕನ್ನು ಕಟ್ಟಿಕೊಳ್ಳುವ ಅವಕಾಶಗಳಿಂದ ಯುವ ಜನಾಂಗನ್ನು ಹೊರತುಪಡಿಸಿದರೆ ವರ್ತಮಾನ ಹಾಗೂ ಭವಿಷ್ಯ ಹಿನ್ನಡೆಯನ್ನ್ನು ಅನುಭವಿಸುವಂತಾಗುವ ಹೊಣೆಗೆ ಭಾದ್ಯಸ್ಥರಾಗುತ್ತೇವೆಂದು ಅವರು ಎಚ್ಚರಿ ಸಿದರು.ಘಟಕದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು ಕೈಗೆತ್ತಿಕೊಂಡಿರುವ ಕಾರ್ಯ ಶೀಘ್ರ ಕೈಗೂಡಿ ಉತ್ತಮ ದಾಖಲೀಕರಣದ ಹೊತ್ತಗೆಯಾಗಿ ಮೂಡಿರಲೆಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರಿನ ಕೇಂದ್ರ ಸಮಿತಿ ಅಧ್ಯಕ್ಷ ತಿಮ್ಮೇಗೌಡ ಐಎಎಸ್ ಅವರು ಮಾತನಾಡಿ,ವೈವಿಧ್ಯಮಯ ಕಲೆ,ಸಾಂಸ್ಕೃತಿಕ ಹಿನ್ನೆಲೆಯಿರುವ ಗಡಿನಾಡು ಕಾಸರಗೋಡು ಹಾಗೂ ಕರಾವಳಿ ಕರ್ನಾಟಕದ ಶ್ರೀಮಂತಿಕೆಯ ದಾಖಲೀಕರಣ ಯತ್ನಗಳು ಸಾಕಷ್ಟು ಆಗಬೇಕಿದೆ.ಈ ನಿಟ್ಟಿನಲ್ಲಿ ಜಾನಪದ ಪರಿಷತ್ತಿನ ಗಡಿನಾಡ ಘಟಕ ಕೈಗೆತ್ತಿಕೊಂಡಿರುವ ಯೋಜನೆ ಸವಾಲಿನದ್ದಾದರೂ ಪರಸ್ಪರ ಸಹಕಾರ,ಕಾರ್ಯಕ್ಷಮತೆ,ಲಕ್ಷ್ಯದೆಡೆಗಿನ ಹಠ ಸಾಧೆಗಳಿಂದ ಕರ್ನಾಟಕದ ಇತರ ಘಟಕಗಳಿಗಿಂತ ಭಿನ್ನವಾಗಿ ಶೀಘ್ರ ಗಮ್ಯದೆಡೆಗೆ ತಲಪಲಿದೆಯೆಂದು ಭರವಸೆಯ ನುಡಿಗಳನಾಡಿದರು.ಘಟಕವು ಇನ್ನಷ್ಟು ಹೊಸ ಯೋಜನೆಗಳೊಂದಿಗೆ ಹೊಸ ಶಖೆಗೆ ನಾಂದಿಹಾಡಿ ಮಾದರಿಯಾಗಲೆಂದು ಹಾರೈಸಿದರು.

ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಪ್ರಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ಘಟಕದ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್,ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ,ಕೇಳು ಮಾಸ್ಟರ್ ಅಗಲ್ಪಾಡಿ,ಬಿ.ಬಾಲಕೃಷ್ಣ ಅಗ್ಗಿತ್ತಾಯ,ಪುರುಷೋತ್ತಮ ಭಟ್ ಕೆ,ಅಖಿಲೇಶ್ ನಗುಮುಗಂ,ಉದ್ಯಮಿಗಳಾದ ಅಜಯ ಪೈ,ಸುಧೀರ್ ಪೈ,ಭಾಗ್ಯಾ ಕೆವಿಆರ್ ಠಾಗೂರ್,ಶಶಿಕಲಾ ತಿಮ್ಮೇಗೌಡ,ಅಶ್ವಿನಿ ಕೆ.ಪ್ರಸಾದ್ ನಾಣಿತ್ತಿಲು ಮೊದಲಾದವರು ಉಪಸ್ಥಿತರಿದ್ದರು.ಪುರುಷೋತ್ತಮ ಭಟ್ ಕೆ. ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English