ಸತ್ಕರ್ಮಗಳ ಮೂಲಕ ಭಗವಂತನ ಕೃಷೆಗೆ ಪಾತ್ರರಾಗಬೇಕು-ಆನೆಗೊಂದಿ ಶ್ರೀ.

8:11 PM, Tuesday, April 12th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

Anegundi

ಉಪ್ಪಳ: ಕ್ಷೇತ್ರಗಳಲ್ಲಿ ಭಗವಂತನ ಸಾನ್ನಿಧ್ಯ ನಿರಂತರವಾಗಿರಬೇಕಾದರೆ ನಿಷ್ಠೆಯ ಪೂಜೆ,ಅರ್ಚನೆಗಳು,ವೇದ ಪಾರಾಯಣಗಳು ಸದಾ ನಡೆಯುತ್ತರಬೇಕು.ಶುದ್ದ ಹೃದಯದ ಆರಾಧನೆಗೆ ಭಗವಂತ ಒಲಿದು ಅನುಗ್ರಹಿಸುತ್ತಾನೆಯೆಂದು ಕಟಪಾಡಿ ಆನೆಗೊಂದಿ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನವಿತ್ತರು.

ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಜೀವನದ ಸುಖವೆಂದರೆ ತ್ಯಾಗ ಮತ್ತು ಕರ್ಮಗಳ ಅನುಸಂಧಾನವಾಗಿದೆ.ಐಶಾರಾಮಿ ಬೇಕುಗಳನ್ನು ತ್ಯಜಿಸಿ ಸತ್ಕರ್ಮಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವುದು ನೈಜ ಸುಖವೆಂದು ನಾವು ಅರ್ಥೈಸುವುದರಲ್ಲಿ ಹಿಂದುಳಿಯುತ್ತಿರುವುದು ದುರಂತ.ಈ ನಿಟ್ಟಿನಲ್ಲಿ ಶ್ರೀಮದ್ ಭಗವದ್ಗೀತಾ ಪಾರಾಯಣ ಎಲ್ಲರೂ ನಿತ್ಯ ಮಾಡಬೇಕಾದ ಅಗತ್ಯವಿದೆಯೆಂದು ಅವರು ತಿಳಿಸಿದರು.

ಮಂಗಳೂರು ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.ವೇದಮೂರ್ತಿ ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.ಸುಫಲ ಚಂದ್ರ ನ್ಯಾಕ್ ಮಂಗಲ್ಪಾಡಿ,ಮಾಗಣೆ ಪ್ರಮುಖರಾದ ಡಾ.ಸುರೇಶ್ ಮಯ್ಯ,ಉದ್ಯಾವರ ಮಾಡ ಕ್ಷೇತ್ರದ ಡಾ.ಜಯಪಾಲ ಶೆಟ್ಟಿ,ಮಧೂರು ಕ್ಷೇತ್ರ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್,ಉದ್ಯಮಿ ಮಂಗಲ್ಪಾಡಿ ಕಿರಣ್ ಹೆಗ್ಡೆ,ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಉದ್ಯಮಿ ಸುರೇಶ್ ಕಾಸರಗೋಡು,ಎನ್.ಸಿ.ಐಲ್,ಕೃಷ್ಣ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.

ಅಕ್ಷತಾ ಕೈಕಂಬ ಪ್ರಾರ್ಥನೆ ಹಾಡಿದರು.ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಸ್ವಾಗತಿಸಿ,ಸುಧೀಂದ್ರ ಪ್ರಕಾಶ್ ಐಲ್ ಕಾರ್ಯಕ್ರಮ ನಿರೂಪಿಸಿದರು.ಪುರುಷೋತ್ತಮ ಪ್ರತಾಪನಗರ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಶ್ರೀದೇವಿ ವೈಭವ ಹರಿಕಥಾ ಸತ್ಸಂಗ ನಡೆಯಿತು.ರಾತ್ರಿ ಭಕ್ತಿ ರಸಮಂಜರಿ ನಡೆಯಿತು.

ಸೋಮವಾರ ಬೆಳಿಗ್ಗೆ ಗಣಪತಿಹವನ,ಪರಿಕಲಶಾಭಿಷೇಕ,ಬಳಿಕ 10.55 ಕ್ಕೆ ಬ್ರಹ್ಮಕಲಶಾಭಿಷೇಕ,ಗಣಪತಿ,ಶಾಸ್ತಾರ ದೇವರಿಗೆ,ವ್ಯಾಘ್ರ ಚಾಮುಂಡಿ ದೈವಕ್ಕೆ ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ,ಮಹಾ ಅನ್ನಸಂತರ್ಪಣೆ,ಮಂತ್ರಾಕ್ಷತೆ ನಡೆಯಿತು.ರಾತ್ರಿ 8 ಗಂಟೆಗೆ ರಂಗಪೂಜೆ, ಬಲಿ ಉತ್ಸವ,ಬಟ್ಟಲು ಕಾಣಿಕೆ,ಮಂತ್ರಾಕ್ಷತೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪೂರ್ವಾಹ್ನ 11.45 ರಿಂದ ಪ್ರಸಿದ್ದ ಕಲಾವಿದ ಅನಂತಪದ್ಮನಾಭ ಐಲ ಮತ್ತು ತಂಡದವರಿಂದ ಸ್ಯಾಕ್ಸೋಪೋನ್ ಕಾರ್ಯಕ್ರಮ ನಡೆಯಿತು. ಬ್ರಹ್ಮಕಲಶೋತ್ಸವದ ದಿನವಾದ ಸೋಮವಾರ ವಿವಿಧೆಡೆಗಳಿಂದ ತಲಪಿದ ಸುಮಾರು ಎಂಟು ಸಾವಿರಕ್ಕಿಂತಲೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವದನುಗ್ರಹಕ್ಕೆ ಪ್ರಾರ್ಥಿಸಿದರು. ಕ್ಷೇತ್ರದ ವಾರ್ಷಿಕ ವಿಷು ರಾಜ್ರೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಎ.13ರಿಂದ 18ರ ವರೆಗೆ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English