ಮಂಜೇಶ್ವರ : ಮುಸ್ಲಿಂ ಲೀಗ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ತೂಮಿನಾಡು ಹಾಗೂ ಕುಂಜತ್ತೂರು ಪರಿಸರದ ಸುಮಾರು 40 ರಷ್ಟು ಯುವಕರು ಲೀಗ್ ನಲ್ಲಿ ಬೇಸೆತ್ತು ಸಿಪಿಎಂ ಗೆ ಸೇರ್ಪಡೆಗೊಂಡ ಘಟನೆ ನಡೆದಿದೆ.
ಸಕ್ರಿಯವಾಗಿ ಕಾರ್ಯಕರ್ತರಾಗಿದ್ದ ನಮ್ಮ ಯಾವೊಂದು ಬೇಡಿಕೆಯನ್ನು ಕೂಡಾ ಮುಸ್ಲಿಂ ಲೀಗ್ ನೇತಾರರು ನೆರವೇರಿಸಿಲ್ಲವೆಂಬುದಾಗಿ ಸಿಪಿಎಂ ಗೆ ಸೇರ್ಪಡೆಗೊಂಡ ಯುವಕರ ಮುಖಂಡ ತೂಮಿನಾಡು ನಿವಾಸಿ ಮುನೀರ್ ಕೆ ಎ ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಎಡರಂಗದ ಅಭ್ಯರ್ಥಿ ಸಿ ಎಚ್ ಕುಂಞಂಬುರವರ ವಿಜಯಕ್ಕೆ ಪ್ರಯತ್ನಿಸುವುದಾಗಿ ಯುವಕರು ತೀರ್ಮಾನ ಕೈಗೊಂಡಿರುವುದಾಗಿ ಹೇಳಲಾಗಿದೆ.
Click this button or press Ctrl+G to toggle between Kannada and English