ಈಸ್ಟ್ ಎಳರಿ ಹಾಗೂ ಮಂಜೇಶ್ವರ ಕಾಂಗ್ರೆಸ್ ಬಂಡುಕೋರರ ಸಭೆ

8:37 PM, Tuesday, April 12th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
East Elari

ಮಂಜೇಶ್ವರ: ಜಿಲ್ಲಾ ಕಾಂಗ್ರೆಸ್ (ಡಿ ಸಿ ಸಿ) ಗೆ ತಲೆನೋವನ್ನು ಸೃಷ್ಟಿಸಿದ ಈಸ್ಟ್ ಎಳರಿ ಕಾಂಗ್ರೆಸ್ ಬಂಡುಕೋರರ ನೇತೃತ್ವ ಹೊಸ ರಾಜಕೀಯ ಪಕ್ಷವನ್ನು ರೂಪೀಕರಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ನಿಂದ ಶಿಶ್ತು ಕ್ರಮದ ಹೆಸರಲ್ಲಿ ಹೊರ ಹಾಕಲ್ಪಟ್ಟ ಸಮಾನ ಮನಸ್ಕರನ್ನು ಭೇಟಿಯಾಗಿ ಅವರೊಡನೆ ಚರ್ಚೆಗೆ ಚಾಲನೆ ನೀಡಿರುವುದಾಗಿ ಕಾಂಗ್ರೆಸ್ ಬಂಡುಕೋರ ನೇತಾರರು ತಿಳಿಸಿದ್ದಾರೆ.

ಈಸ್ಟ್ ಎಳರಿಯ ಕಾಂಗ್ರೆಸ್ ಬಂಡುಕೋರ ನೇತಾರ ಜೇಮ್ಸ್ ಪದ್ಮಾಂಗನ್ ಹೊಸ ರಾಜಕೀಯ ಬೆಳವಣಿಗೆಗೆ ರೂಪು ನೀಡುತಿದ್ದಾರೆ. ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದ ಈಸ್ಟ್ ಎಳರಿ ಪಂಚಾಯತಿನಲ್ಲಿ ಅವರ ಕೋಟೆಯನ್ನು ನುಚ್ಚುನೂರು ಮಾಡಿದ್ದು ಜೇಮ್ಸ್ ಪಂದಮಾಕಲ್ ನೇತೃತ್ವ ನೀಡಿದ ಜನಕೀಯ ಜನಾಧಿಪತ್ಯ ರಂಗವಾಗಿತ್ತು. ಇದೀಗ ಈಸ್ಟ್ ಎಳರಿಯ ಬಳಿಕ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ನೇತಾರರಾಗಿದ್ದ ಡಿ ಎಂ ಕೆ ಮಹಮ್ಮದ್ ರವರನ್ನು ಜಿಲ್ಲಾ ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ನ ವಿರುದ್ದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಹೊರ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರು ಕೂಡಾ ಈಗಾಗಲೇ ಮೀನು ಕಾರ್ಮಿಕರು, ಕೃಷಿ ಕಾರ್ಮಿಕರ ಜತೆಯಾಗಿ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮಂಜೇಶ್ವರ ಹಾಗೂ ತ್ರಿಕರಿಪ್ಪುರ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡುಕೋರರು ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ತ್ರಿಕರಿಪ್ಪುರದಿಂದ ಜೇಮ್ಸ್ ಪ್ದ್ಮಾಂಗನ್ ಹಾಗೂ ಮಂಜೇಶ್ವರ ದಿಂದ ಡಿ ಎಂ ಕೆ ಮಹಮ್ಮದ್ ರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ನಡೆದ ಡಿ ಎಂ ಕೆ ಮಹಮ್ಮದ್ ರವರ ಚುನಾವಣಾ ಸಮಾವೇಶವನ್ನು ಜೇಮ್ಸ್ ಪಥ್ಮಾಂಗನ್ ಉದ್ಘಾಟಿಸಿದರು. ಡಿ ಎಂ ಕೆ ಮಹಮ್ಮದ್ ಅಧ್ಯಕ್ಷತೆ ವಹಿಸಿದರು. ಹಮೀದ್ ಹೊಸಂಗಡಿ, ಶೇಕುಂಞಿ, ಇದ್ರೀಸ್, ಜೀಜೋ, ಪಿ ಜೋಸೆಫ್, ಸನ್ನಿ ಜಯತುರತ್ತ್, ಟೋಮಿ ಪುದು ವಳ್ಳಿ, ಜಯೀಸ್ ಕುರುಮಟ್ಟತ್ತ್, ಗಣೇಶ್ ಪಾವೂರು ಮೊದಲಾದವರು ಮಾತನಾಡಿದರು. ಅಡಿಯೋಡಿ ಮಾಸ್ಟರ್ ಸ್ವಾಗತಿಸಿ ನಾರಾಯಣ ಶೆಟ್ಟಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English