ಕುಂಬಳೆ : ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ರವರು ಮಾಡಿದ ಸಾಧನೆ ಗಮನಾರ್ಹವಾಗಿದೆಯೆಂದು ಮಾಜಿ ಕೇಂದ್ರ ಸಚಿವ ರಾಜ್ಯ ಸಭಾ ಸದಸ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಪುತ್ತಿಗೆ ಪಂಚಾಯತ್ ನ ಕಂದಲ್ ನಲ್ಲಿ ಶನಿವಾರ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಯು.ಡಿ.ಎಫ್ ಅಭ್ಯರ್ಥಿ ಪಿ.ಬಿ ಅಬ್ದುಲ್ ರಝಾಕ್ ರವರ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಳೆದ 5 ವರ್ಷಗಳಲ್ಲಿ 877 ಕೋಟಿ ರೂ ಮೊತ್ತದ ಯೋಜನೆಗಳಿಗೆ ಅಂಗೀಕಾರ ದೊರಕಿಸಿ ಕೊಟ್ಟಿರುವುದು ಶಾಸಕರ ಕ್ರಿಯಾಶೀಲತೆಗೆ ಪ್ರತ್ಯಕ್ಷ ಸಾಕ್ಷಿಯೆಂದು ಎಂದು ಹೇಳಿದ ಅವರು ಕೇರಳದಲ್ಲಿ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದ ಕೇರಳಿಗರು ಪ್ರಜ್ಞಾವಂತರು . ಈ ಬಾರಿಯ ಚುನಾವಣೆಯಲ್ಲಿಯೂ ಬಿ.ಜೆ.ಪಿ ಖಾತೆ ತೆರೆಯದಂತೆ ಮಂಜೇಶ್ವರದ ಮತದಾರರು ಜಾಗರೂಕರರಾಗಿರುವಂತೆ ಅವರು ಕರೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಕಾರ್ಯದರ್ಶಿ ಗಫೂರ್ , ಎ.ಐ.ಸಿ.ಸಿ ಸದಸ್ಯ ಪಿ.ವಿ ಮೋಹನ್ , ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಅಭ್ಯರ್ಥಿ ಪಿ.ಬಿ ಅಬ್ದುಲ್ ರಝಾಕ್ , ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ ಸೋಮಶೇಖರ್.ಜೆ.ಎಸ್ , ಕೆ.ಪಿ.ಸಿ.ಸಿ ನಿರ್ವಾಹಕ ಸದಸ್ಯ ಪಿ.ಎ ಅಶ್ರಫಾಲಿ , ಎ.ಎ ಕಯ್ಯಾಂಕುಡೇಲ್ , ಸುಂದರ ಆರಿಕ್ಕಾಡಿ , ಟಿ.ಎ ಮೂಸಾ , ಅಬ್ಬಾಸ್ ಕುಂಬಳೆ, ನಾರಾಯಣ ನಂಬಿಯಾರ್ , ಇಬ್ರಾಹಿಂ ಮುಂಡ್ಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English