ಕಾಸರಗೋಡು: ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆದಿದ್ದು, ವಿದ್ಯುತ್ ಸಂಪರ್ಕ ಸ್ಥಗಿತದಿಂದಾಗಿ ಹಲವೆಡೆ ಸುಗಮ ಮತದಾನಕ್ಕೆ ಅಡ್ಡಿಯುಂಟಾಯಿತು. ವಿದ್ಯುತ್ ಕೈಕೊಟ್ಟ ಮತಗಟ್ಟೆಗಳಲ್ಲಿ ಮೇಣದ ಬತ್ತಿ ಬಳಸಿ ಮತದಾನಕ್ಕೆ ಸೌಕರ್ಯ ಕಲ್ಪಿಸಲಾಯಿತು.
ಬಹುತೇಕ ಬೂತ್‌ಗಳಲ್ಲಿ ಬೆಳಗ್ಗಿನಿಂದಲೇ ಮಹಿಳೆಯರ ಉದ್ದನೆಯ ಸರದಿ ಕಂಡು ಬಂತು. ಮೊದಲ ನಾಲ್ಕು ಗಂಟೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.28.63 ಮತದಾನವಾಗಿತ್ತು. ಕಾಂಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚ ಶೇ.39 ಮತದಾನವಾಗಿದ್ದರೆ, ತೃಕ್ಕರಿಪುರದಲ್ಲಿ ಶೇ. 28.3 ಮತದಾನವಾಗಿತ್ತು. ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಶೇ.28, ಮಂಜೇಶ್ವರದಲ್ಲಿ ಶೇ.27.8 ಮತ್ತು ಕಾಸರಗೋಡಿನಲ್ಲಿ ಶೇ.26.7 ಮತದಾನವಾಗಿತ್ತು. ಕೆಲವೊಂದು ಬೂತ್‌ಗಳಲ್ಲಿ ಮಾತಿನ ಚಕಮಕಿ ಬಿಟ್ಟರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.
Click this button or press Ctrl+G to toggle between Kannada and English