ಮಂಜೇಶ್ವರ : ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಕುತೂಹಲಕಾರಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಬಹು ನಿರೀಕ್ಷಿತ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಪ್ರತಿಸ್ಪರ್ಧಿ ಯುಡಿಎಫ್ ಅಭ್ಯರ್ಥಿ ಪಿ.ಬಿ ಅಬ್ದುಲ್ ರಸಾಕ್ ಎದುರು ಕೇವಲ 89 ಅಂತರದ ಸೋಲನುಭವಿಸಲು ಕಾರಣಗಳ ಲೆಕ್ಕಾಚಾರ ನಡೆಯುತ್ತಿದ್ದು, ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದವರು ಬಿಜೆಪಿ ಮತ ವಿಭಜನೆಗೆ ಕಾರಣವೆಂದು ಪ್ರಾಥಮಿಕ ವರದಿಗಳು ತಿಳಿಸುತ್ತವೆ.
ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ರವರ ಹೆಸರಿನೊಡನೆ ಹೆಚ್ಚು ತಾಳೆಯಾಗುವ ಪೆರ್ಲ ಪ್ರದೇಶದ ಕೆ.ಸುಂದರ ಎಂಬವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ467 ಮತಗಳನನು ಪಡೆದಿದ್ದಾರೆ. ಉಳಿದ ಸ್ವತಂತ್ರ ಅಭ್ಯರ್ಥಿಗಳಾದ ಬಶೀರ್ ಅಹಮ್ಮದ್ 756 ,ಕೆ.ವಿ ಮುನೀರ್ 224 ,ಜೋನ್ ಡಿಸೋಜಾ 207 ಮತ್ತು ಬಿಎಸ್‌ಪಿ ಅಭ್ಯರ್ಥಿ ಕೆ.ರವಿಚಂದ್ರ 365 ಮತಗಳನ್ನು ಪಡೆದಿದ್ದಾರೆ.
ನೋಟಾಕ್ಕೂ ಮತ:
ಮತದಾರರು ತಮಗೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಬೆಂಬಲಿಸಲು ಉಮೇದು ಇಲ್ಲದ ವೇಳೆ ಚಲಾಯಿಸಲೆಂದಿರುವ ನೋಟಾ ಮತದಾನದಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ 645 ಮತದಾರರು ಇದನ್ನು ಪುರಸ್ಕರಿಸಿದ್ದಾರೆ.
ನೋಟಾಕ್ಕೆ ಬಿದ್ದ ಮತ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಬಿದ್ದ ಮತದ ಶೇ.20 ಮತಗಳಿಂದ ಕೆ.ಸುರೇಂದ್ರನ್ ಸೋಲನುಭವಿಸಲು ಕಾರಣವೆಂದು ತಿಳಿಯಲಾಗಿದೆ.
Click this button or press Ctrl+G to toggle between Kannada and English