ಮಂಗಳೂರು: ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಎತ್ತಿನ ಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮೇ 19ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೆದಿದ್ದ ಸ್ವಯಂ ಘೋಷಿತ ಬಂದ್ ಯಶಸ್ವೀಯಾಗಿದೆ.
ಬಂದ್ ಶಾಂತಿಯುತವಾಗಿದ್ದು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು, ಸರ್ಕಾರಿ ಬಸ್‌ಗಳು ಸಂಚರಿಸಿಲ್ಲ. ಕೆಲವೆಡೆ ಹೊರರಾಜ್ಯದಿಂದ ಬಂದ ಪ್ರಯಾಣಿಕರು ಪರದಾಡಬೇಕಾಗಿ ಬಂತು . ಮೆಡಿಕಲ್ ಶಾಪ್ ಮಾತ್ರ ಬೆಳಗ್ಗಿನಿಂದಲೇ ತೆರೆದಿತ್ತು.
ಅಂಬುಲೆನ್ಸ್‌ಗಳು ಹೊರತು ಪಡಿಸಿ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು ಹೆದ್ದಾರಿ ಸಹಿತ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿತ್ತು.
ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಮಂಗಳೂರು ನಗರ ಸೇರಿದಂತೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳ್ತಂಗಡಿ ಯಲ್ಲಿ ಕಿಡಿಗೇಡಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದ್ದು , ಉಳಿದೆಡೆ ಶಾಂತಿಯುತವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. .
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, “ನಾವು ಬಂದ್‌ಗೆ ಕರೆ ನೀಡಲಿಲ್ಲ. ಆದರೆ, ಕರಾವಳಿಯ ಜೀವನದಿಯ ಮೇಲೆ ಉಂಟಾಗು ತ್ತಿರುವ ದಾಳಿಯನ್ನು ವಿರೋಧಿಸಿ ಕರಾವಳಿಯ ಜನತೆ ಸ್ವಯಂಪ್ರೇರಿತ ವಾಗಿ ಬಂದ್ ನಡೆಸಲು ಮುಂದಾಗಿ ದ್ದಾರೆ. ಸರಕಾರ ಇನ್ನಾದರೂ ಎಚ್ಚೆತ್ತು ಯೋಜನೆಯನ್ನು ತಡೆಯಬೇಕು. ಕರಾ ವಳಿ ಭಾಗದ ಜನರ ಭಾವನೆಗಳಿಗೆ ಬೆಲೆ ನೀಡದ ರಾಜ್ಯ ಸರಕಾರದ ವಿರುದ್ಧ ದ.ಕ. ಜಿಲ್ಲೆಯ ಪ್ರತಿಕ್ರಿಯೆ ಇದಾಗಲಿದೆ ಎಂದು ತಿಳಿಸಿದ್ದಾರೆ.
ಮೇ 19ರ ಸ್ವಯಂಘೋಷಿತ ದ.ಕ. ಜಿಲ್ಲಾ ಬಂದ್‌ಗೆ ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಹೋರಾಟ ಸಮಿತಿ, ಮಂಗಳೂರು ವಕೀಲರ ಸಂಘ, ಯುವವಾಹಿನಿ ಮಂಗಳೂರು ಘಟಕ, ಜೆಡಿಎಸ್ ಮೀನುಗಾರಿಕಾ ಘಟಕ ಮತ್ತು ಜಿಲ್ಲಾ ಮೀನುಗಾರಿಕಾ ಘಟಕ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಮಂಗಳೂರು, ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ, ಅಖೀಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಬೆಂಬಲ ನೀಡಿದೆ.
Click this button or press Ctrl+G to toggle between Kannada and English