ಏರ್ ಇಂಡಿಯಾ ವಿಮಾನ ದುರಂತದ ಒಂದು ವರ್ಷದ ಕಹಿ ನೆನಪು

7:46 PM, Saturday, May 21st, 2011
Share
1 Star2 Stars3 Stars4 Stars5 Stars
(No Ratings Yet)
Loading...

ಏರ್ ಇಂಡಿಯಾ ದುರಂತದ ಒಂದು ವರುಷ ಮಂಗಳೂರು : ಏರ್ ಇಂಡಿಯಾ  ಬೋಯಿಂಗ್ ಏರ್‌ಕ್ರಾಫ್ಟ್ 737- 800  ವಿಮಾನ ದುರಂತ ನಡೆದು  ಮೇ 22 ಕ್ಕೆ   ಒಂದು ವರ್ಷವಾದ ಕಹಿ ನೆನಪಿನ ದಿನವನ್ನು ಮಂಗಳೂರು ವಿಮಾನ ದುರಂತ ಸಂತ್ರಸ್ತರ ಕುಟುಂಬಗಳ ಸಂಘ ಇಂದು ಆಚರಿಸಿತು.
ಇಂದು ಬೆಳಿಗ್ಗೆ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯ ಅಧ್ಯಕ್ಷತೆಯನ್ನು ಮಾಹೆಯ ಮಾಜಿ ಡೀನ್ ಡಾ.ಬಿ.ಎಂ. ಹೆಗ್ಡೆ ವಹಿಸಿದ್ದರು.
 ರಾಜ ಯೋಗಿಣಿ ಬ್ರಹ್ಮಕುಮಾರಿ ಪಿ.ಕೆ. ನಿರ್ಮಲಾ

ರೆ.ಫಾ. ರವಿ ಸಂತೋಷ್ ಕಾಮತ್‌

ಅಬ್ದುಲ್ ಅಝೀಝ್ ಫೈಝಿದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ರಾಜ ಯೋಗಿಣಿ ಬ್ರಹ್ಮಕುಮಾರಿ ಪಿ.ಕೆ. ನಿರ್ಮಲಾ, ಅಬ್ದುಲ್ ಅಝೀಝ್ ಫೈಝಿ, ರೆ.ಫಾ. ರವಿ ಸಂತೋಷ್ ಕಾಮತ್‌ರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು.
ಏರ್ ಇಂಡಿಯಾ ದುರಂತದ ಒಂದು ವರುಷ

ಏರ್ ಇಂಡಿಯಾ ದುರಂತದ ಒಂದು ವರುಷ ಈ ದುರಂತದಲ್ಲಿ 158 ಮಂದಿ ಸಜೀವ ದಹನವಾಗಿದ್ದರೆ, ಎಂಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು
ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳು ಏರ್ ಇಂಡಿಯಾದಿಂದ ಪರಿಹಾರಕ್ಕಾಗಿ ಇನ್ನೂ ಕಾನೂನು ಹೋರಾಟದಲ್ಲೇ ಮುಂದುವರಿಯ ಬೇಕಾದ ಸ್ಥಿತಿ ಮುಂದುವರಿದಿರುವಂತೆಯೇ, ದುರಂತದಲ್ಲಿ ಬದುಕುಳಿದವರಲ್ಲಿ ಕೆಲವರು ಏರ್ ಇಂಡಿಯಾದ ಉದ್ಯೋಗ ಭರವಸೆಯನ್ನು ಎದುರು ನೋಡುತ್ತಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English