ಮಂಗಳೂರು : ನಗರದ ಮೈದಾನ ರಸ್ತೆಯ 3ನೇ ಕ್ರಾಸಿನ ಸಮೃದ್ಧಿ ಲಾಡ್ಜಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇನೇಜರ್ ಆಶ್ರಫ್ ಜೊತೆಗೆ ಆತನಿಗೆ ಸಹಕರಿಸುತ್ತಿದ್ದ ರೂಂ ಬೋಯ್ ರವಿ ಶಿರಸಿ, ಹಾಗೂ ಕ್ಲೀನರ್ ರಾಜೇಶ್, ಗಿರಾಕಿಗಳಾದ ಹರೀಶ್ ಬೆಂಗಳೂರು, ಅಬ್ಬಾಸ್ ತೊಕ್ಕೋಟ್ಟು, ಅರುಣ್ ನೀರು ಮಾರ್ಗ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆಂದ್ರಮೂಲದ ಮಮತಾ (26ವ) ಎಂಬವರನ್ನು ಬಂಧಿಸಲಾಗಿದೆ.
ಇಂದು ಸಂಜೆ 4 ಗಂಟೆಗೆ ಎಸಿಪಿ ರವೀಂದ್ರ ಗಡದಿಯವರಿಗೆ ಬಂದ ಮಾಹಿತಿಯಂತೆ ಬಂದರು ಠಾಣೆಯ ಇನ್ಸ್ ಫೆಕ್ಟರ್ ಕೆ.ಕೆ. ರಾಮಕೃಷ್ಣ ಹಾಗೂ ಸಿಬ್ಬಂದಿಗಳು ಮೈದಾನ ರಸ್ತೆಯ ಸಮೃದ್ಧಿ ಲಾಡ್ಜಿನ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಎಳು ಮಂದಿಯನ್ನು ಬಂದಿಸಿದ್ದಾರೆ, ಬಂದಿತರನ್ನು ಇಂದು ರಾತ್ರಿ ನ್ಯಾಯಾದೀಶರ ಮುಂದೆ ಹಾಜರು ಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಇನ್ಸ್ ಫೆಕ್ಟರ್ ಕೆ.ಕೆ. ರಾಮಕೃಷ್ಣ ತಿಳಿಸಿದ್ದಾರೆ.
Click this button or press Ctrl+G to toggle between Kannada and English