ಮಂಗಳೂರು:2005 ರಿಂದ ಪೌಷ್ಟಿಕ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನುಬಳಸುವ ಬಗ್ಗೆ ಗ್ರಾಮಾಂತರಪ್ರದೇಶದ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದು,ಈಗಾಗಲೇ ಶೇಕಡಾ 47 ರಷ್ಟು ಪ್ರಗತಿಯಾಗಿದೆ. ಅಯೋಡಿನ್ ಇಲ್ಲದ ಉಪ್ಪನ್ನು ಈಗಲೂ ಕೆಲವು ಗ್ರಾಮಾಂತರ ಜನರು ಬಳಸುತ್ತಿದ್ದಾರೆ. ಅಯೋಡಿನ್ ಯುಕ್ತ ಉಪ್ಪನ್ನು ಎಲ್ಲರೂ ಬಳಸುವ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ. ಉಪ್ಪುತಯಾರಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಅಯೋಡಿನ್ಯುಕ್ತ ಉಪ್ಪು ಹಲವಾರು ರೋಗಗಳನ್ನು ಹತೋಟಿಯಲ್ಲಿಡಬಲ್ಲದು ಎಂದು ಮಂಗಳೂರು ತಾಲೂಕಿನ ಸಹಾಯಕ ಕಮೀಷನರ್ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅಭಿಪ್ರಾಯ ಪಟ್ಟರು. ಅವರು ಇಂದು (31-5-11)ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಎರ್ಪಡಿಸಿದ್ದ ಅಯೋಡಿನ್ ಯುಕ್ತ ಉಪ್ಪು ಬಳಸುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಾಗಾರದ ಉದ್ದೇಶವನ್ನು ನವದೆಹಲಿಯ ಡಾ.ಅಜಿತ್ ಚಕ್ರವರ್ತಿ ವರು ನೀಡುತ್ತಾ, ಅಯೋಡಿನ್ ಪೂರೈಕೆ ಕಡಿಮೆಯಾದರೆ ಸಾರ್ವಜನಿಕರಿಗೆ ವಿವಿಧ ರೋಗಗಳು ಬರುವ ಸಂಭವವಿದೆ.ಈ ಹಿನ್ನಲೆಯಲ್ಲಿ ಉಪ್ಪಿನೊಂದಿಗೆ ತೆಗೆದುಕೊಳ್ಳುವ ಅಯೋಡಿನ್ ನಿರಂತರವಾಗಿ ಬೇಕಾಗಿರುತ್ತದೆ. ಆದ್ದರಿಂದ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಬೇಕು ಎಂದರು. ಜಿಲ್ಲಾ ಕ್ಷಯ ಮೆಡಿಕಲ್ ಆಫೀಸರ್ ಡಾ ರಾಮಕೃಷ್ಣರಾವ್ ಉಪ್ಪು ತಯಾರಕರು ಉಪ್ಪಿನಲ್ಲಿ ಅಯೋಡಿನ್ ಪ್ರಮಾಣ ಸೇರಿಸುವ ಬಗ್ಗೆ ಇಂಜಿನಿಯರ್ರಿಂದ ತಾಂತ್ರಿಕಸಲಹೆ ಪಡೆಯುವುದು ಆವಶ್ಯಕ. ಎಲ್ಲಾ ಜನರಿಗೆ ಅಯೋಡಿನ್ ಯುಕ್ತ ಉಪ್ಪು ಸೇವಿಸುವ ಕುರಿತು ತಿಳುವಳಿಕೆ ನೀಡಿ ಔಷದಯುಕ್ತ ಗುಣದ ಆವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ರೆ,ಫಾ.ಪ್ಯಾಟ್ರಿಕ್ ರೊಡ್ರಿಗಸ್ ವಹಿಸಿದ್ದರು. ಕಾರ್ಯಾಗಾರದಲ್ಲಿ ಮಂಗಳೂರು,ಉಡುಪಿ,ಚಿಕ್ಕಮಗಳೂರು,ಕಾರವಾರ,ಬೆಂಗಳೂರಿನ ಉಪ್ಪು ತಯಾರಕರು ಹಾಗೂ ವಿತರಕರು ಸಾಲ್ಟ್ ಕಮಿಷನರ್ ಜೈಪುರ,ಮಹಿಳಾ ಮತ್ತು ಮಕ್ಕಳ ಇಲಾಖೆ, ಆಹಾರ ಮತ್ತು ಪಡಿತರ ಪೂರೈಕೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಸಾಲ್ಟ್ ಕಮೀಷನರ್ ಸಿ.ರಘು ಹಾಗೂ ಎನ್.ಸುಂದರರಾಜನ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಾಗಾರದ ವಿವರಗಳನ್ನು ತಿಳಿಸಿದರು. ಮಂಗಳೂರಿನ ಮಲೇರಿಯಾ ನಿರೀಕ್ಷಕರಾದ ಶ್ರೀ ಜಯರಾಂ ಪೂಜಾರಿ ವಂದಿಸಿದರು.
Click this button or press Ctrl+G to toggle between Kannada and English