ಗೋ ಶಾಲೆ ಸಹಾಯಾರ್ಥ ಯಕ್ಷಗಾನ

5:49 PM, Monday, July 4th, 2011
Share
1 Star2 Stars3 Stars4 Stars5 Stars
(No Ratings Yet)
Loading...

havyaka go shaleವೇಣೂರು: ಜಗದ್ಗುರುಶಂಕರಾಚಾರ್ಯ ಮಹಾ ಸಂಸ್ಥಾನಮ್ ,ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ವೇಣೂರು ಸಮೀಪದ ಗುಂಡೂರಿಯಲ್ಲಿರುವ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜುಲೈ 21ರಂದು ಸಂಜೆ 6ಗಂಟೆಗೆ ಗುರುವಾಯನಕೆರೆ “ನಮ್ಮ ಮನೆ” ಹವ್ಯಕ ಭವನದಲ್ಲಿ  ಶ್ರೀ ಧರ್ಮಸ್ಥಳ ಮತ್ತು ಶ್ರೀ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ “ವಿಷಮರ್ಧನ – ಕುಶಲವ” ಎಂಬ ಪುರಾಣ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ರೂಪದಲ್ಲಿ ಆಡಿತೋರಿಸಲಿದ್ದಾರೆ. ಯಸ್.ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಪೆರುವೋಡಿ ಶ್ಯಾಮ್ ಭಟ್ ಭಾಗವತಿಕೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಚೆಂಡೆ, ಪಡ್ರೆ ಆನಂದ ಮೃದಂಗ, ಬಾಲಕೃಷ್ಣ ಮಣಿಯಾಣಿ ಹಾಸ್ಯ, ಅಂಬಾ ಪ್ರಸಾದ್ ಪಾತಾಳ, ಪುತ್ತೂರು ಗಂಗಾಧರ, ಶರತ್ ಶೆಟ್ಟಿ ತೀರ್ಥಹಳ್ಳಿ ಮುಖ್ಯ ಸ್ತ್ರೀ ವೇಷ, ಕುಂಬ್ಳೆ ಶ್ರೀಧರ ರಾವ್, ವಸಂತ ಗೌಡ, ನವೀನ್ ಶೆಟ್ಟಿ ಕೃಷ್ಣಪ್ಪ, ನಿಡ್ಲೆಗೋವಿಂದ ಭಟ್, ಅಮ್ಮುಂಜೆ ಮೋಹನ, ಅರಳ ಗಣೇಶ ಶೆಟ್ಟಿ, ದಿವಾಕರ ಬಂಗಾಡಿ, ಸುಬ್ರಾಯ ಹೊಳ್ಳ ಕಾಸರಗೋಡು, ಶಿವಪ್ರಸಾದ್ ಭಟ್, ಕುಸುಮೋದರ ಕಲಾವಿದರಾಗಿ ಮಿಂಚಲಿದ್ದಾರೆ.
ಗೋ ಶಾಲೆಗೆ ಸಹಾಯ ನೀಡಲಿಚ್ಛಿಸುವವರು ಅಧ್ಯಕ್ಷರು, ಕಾವೇರಮ್ಮ ಅಮೃತಧಾರಾ ಗೋಶಾಲೆ, ಗುಂಡೂರಿ , ವೇಣೂರು ಅಥವಾ ಗುರುವಾಯನ ಕೆರೆ ನಮ್ಮ ಮನೆ ಹವ್ಯಕ ಭವನ ಇಲ್ಲೂ ನೀಡಬಹುದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English