ಉಪೇಂದ್ರ ಹೊಸ ಚಿತ್ರ ‘ಶ್ರೀಮತಿ’

2:46 PM, Wednesday, July 6th, 2011
Share
1 Star2 Stars3 Stars4 Stars5 Stars
(No Ratings Yet)
Loading...

srimathi/ ಶ್ರೀಮತಿಹಿಂದಿಯ ‘ಐತ್‌ರಾಜ್’ ಚಿತ್ರದ ರೀಮೇಕ್ ‘ಶ್ರೀಮತಿ’ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ ತಯಾರಾಗಿದೆ. ಅಂದ ಹಾಗೆ ಈ  ಚಿತ್ರ ವಯಸ್ಕರಿಗೆ ಮಾತ್ರ. ಉಪ್ಪಿ ಜೊತೆ ಅವರ ಶ್ರೀಮತಿ ಪ್ರಿಯಾಂಕಾ ಉಪೇಂದ್ರಕೂಡಾ ಅಭಿನಯಿಸಿದ್ದಾರೆ.  ಸೆಲೀನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ತಾರಾಗಣದ ಈ  ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ.
ಹದಿ ಹರೆಯದ ಯುವಕರನ್ನು ಬೆಚ್ಚಗೆ ಮಾಡುವ ಕೆಲವು ದೃಶ್ಯಗಳಿರುವುದೇ “ವಯಸ್ಕರ ಚಿತ್ರ”ದ ಹಣೆಪಟ್ಟಿ ಬೀಳಲು ಕಾರಣ ಎನ್ನಲಾಗಿದೆ. ಜುಲೈ 8ಕ್ಕೆ ಉಪೇಂದ್ರ ಶ್ರೀಮತಿ ಚಿತ್ರ ಚಿತ್ರಮಂದಿರದಲ್ಲಿ ಕಾಣಲಿದೆ.
ಈ ಚಿತ್ರವನ್ನು’ಕೆಂಪೇಗೌಡ’ ಚಿತ್ರದ ನಿರ್ಮಾಪಕ ಶಂಕರೇ ಗೌಡ ನಿರ್ಮಿಸಿದ್ದಾರೆ.’ಸೂಪರ್’ ಯಶಸ್ವಿಯಾದ ಬಳಿಕ ಉಪೇಂದ್ರ ಈಗ ಮತ್ತೊಮ್ಮೆ ‘ಶ್ರೀಮತಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದ ಪ್ರಚಾರ ಈಗಾಗಲೇ ಯುವಕರನ್ನು ನಿದ್ದೆಗೆಡಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English