ಮಂಗಳೂರು : ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಮತ್ತು ತುಳುವರಿಗೆ ಅನ್ಯಾಯವಾಗಿದೆ. 1956ರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ನಮ್ಮ ನಾಯಕರು ತುಳು ರಾಜ್ಯದ ಬೇಡಿಕೆಯನ್ನು ಇರಿಸದೆ ತುಳುವರಿಗೆ ಅನ್ಯಾಯವೆಸಗಿದ್ದಾರೆ.ದೇಶದ ಉದ್ಧಾರದ ಹೆಸರಿನಿಂದ ಹೊಸ ಹೊಸ ಕೈಗಾರಿಕೆಗಳು ಬಂದು ತುಳುನಾಡು, ಸಂಸ್ಕೃತಿ ಇದರಿಂದಾಗಿ ನಾಶವಾಗುತ್ತಿದೆ. ತುಳುವರು ಅನಾಥರಾಗಿದ್ದಾರೆ ಈಗ ತೆಲುಗರು ಅವರ ರಾಜ್ಯ ವನ್ನು ಒಡೆದು ಪ್ರತ್ಯೇಕ ತೆಲುಂಗಾಣ ರಾಜ್ಯದ ಬೇಡಿಕೆಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ತೆಲಂಗಾಣ ರಾಜ್ಯವನ್ನು ರಚಿಸಲು ಕೇಂದ್ರ ಸರಕಾರ ಮುಂದೆ ಬಂದರೆ,ತುಳುವರು ನ್ಯಾಯ ಯುತವಾದ ತುಳು ರಾಜ್ಯ ರಚನೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ.
ಈ ಸುವರ್ಣ ಅವಕಾಶವನ್ನು ತುಳುವರು ಉಪಯೋಗಪಡಿಸಿ ಹೋರಾಟಕ್ಕೆ ಸಜ್ಜಾಗಬೇಕು. ತುಳು ರಾಜ್ಯದ ರಚನೆಯಾಗಲಿ, ನಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ರಾಜ್ಯದ ರಚನೆಗೆ ಹೋರಾಟ ಮಾಡುವ ಎಂದು ತುಳು ರಾಜ್ಯ ರಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ತುಳುವರೇ ಒಂದಾಗಿ ಎಂದು ಕರೆ ನೀಡಿದ್ದಾರೆ.
Click this button or press Ctrl+G to toggle between Kannada and English