ಕಾಸರಗೋಡು: ಕಾಸರಗೋಡುಜಿಲ್ಲಾ ಅಭಿವೃದ್ಧಿ ಪ್ಯಾಕೇಜಿ ಅವಲೋಕನ ಸಭೆ ಜಿಲ್ಲಾಕಾರಿ ಸಭಾಂಗಣದಲ್ಲಿ ನಡೆಯಿತು.ಡಾ. ಪ್ರಭಾಕರನ್ ಆಯೋಗವು ನೀಡಿದ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ವರದಿಯಲ್ಲಿ ತಿಳಿಸಲ್ಪಟ್ಟ ವಿವಿಧ ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಯಿತು.
ಇದು ವರೆಗೆ ಕಾಸರಗೋಡು ಅಭಿವೃದ್ಧಿ ಯೋಜನೆಯಡಿ 42 ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ೧೮ ಹೊ ಯೋಜನೆಗಳನ್ನು ಆರಂಭಿಸಲಾಗಿದೆ. ಕಳೆದ ಸಾಲಿನ ರಾಜ್ಯ ಬಜೆಟ್‌ನಲ್ಲಿ ಯೋಜನೆಗಾಗಿ 87.98 ಕೋಟಿರೂ.ಗಳನ್ನು ಮೀಸಲಿರಿಸಲಾಗಿದೆ. ವಿವಿಧ ಖಾತೆಗ ಜನಪ್ರತಿನಿಗಳು ಮೀಸಲಿರಿಸಿದ ಹಣವನ್ನು ಶೀಘ್ರವೇ ಉಪಯೋಗಿಸಿಕೊಂಡು ಯೋಜನೆಗಳನ್ನು ಮುಂದುವರಿಸಬೇಕಿದೆ ಎಂದು ಸಭೆಯಲ್ಲಿ ನಿಧರಿಸಲಾಯಿತು.
ಜಿಲ್ಲಾಧಿಕಾರಿ ಇ. ಚಂದ್ರಶೇಖರನ್, ಕಾಸರಗೋಡು ಸಂಸದ ಪಿ.ಕರುಣಾಕರನ್, ಶಾಸಕರಾದ ಪಿ.ಬಿ ಅಬ್ದುಲ್ ರಜಾಕ್, ಎನ್.ಎ ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಉಪ ಜಿಲ್ಲಾಧಿಕಾರಿ ಮೃಣ್ಮಯೀ ಜೋಷಿ ಅವಲೋಕನಸಭೆಯಲ್ಲಿ ಉಪಸ್ಥಿತರಿದ್ದರು.
ಪೊಲಿಂಗ್ ಅಧಿಕಾರಿ ಪಿ.ಶಾಜಿ ಹಲವು ಯೋಜನೆಗಳ ರೂಪುರೇಶೆಗಳನ್ನು ಸಾದರಪಡಿಸಿದರು.ಎಡಿಎಂ ಅಂಬುಜಾಕ್ಷನ್, ಹಣಕಾಸು ಅಧಿಕಾರಿ ಕೆ. ಕುಞಂಬು ನಾಯರ್ ಹಾಗೂ ವಿವಿಧ ಖಾತೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English