ಕಾಸರಗೋಡು ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು

3:13 PM, Wednesday, July 6th, 2016
Share
1 Star2 Stars3 Stars4 Stars5 Stars
(No Ratings Yet)
Loading...

kasargodಕುಂಬಳೆ : ಮಳೆಗಾಲ ಬಿರುಸುಗೊಳ್ಳುತ್ತಿದ್ದಂತೆ ಕಾಸರಗೋಡು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲವಡೆ ಬೃಹತ್ ಹೊಂಡಗಳು ಬಾಯ್ದೆರೆದುಕೊಂಡಿದೆ.

ಕುಂಬಳೆ ಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಡಾಂಬರು ಎದ್ದು ಹೋಗಿ ಹೊಂಡಗಳು ಉಂಟಾಗಿದ್ದು , ಮಳೆಗೆ ನೀರು ತುಂಬಿರುವುದರಿಂದ ವಾಹನ ಚಾಲಕರ ಗಮನಕ್ಕೆ ಬರದೆ ವಾಹನಗಳು ಅಪಘಾತಕ್ಕೀಡಾಗುತ್ತಿದೆ. ಹೊಂಡ ತಪ್ಪಿಸುವ ಭರದಲ್ಲಿ ಹಲವು ವಾಹನಗಳು ಎದುರಿನಿಂದ ಬರುವ ವಾಹನಗಳಿವೆ ಡಿಕ್ಕಿ ಹೊಡೆದ ಹಲವು ಘಟನೆಗಳು ನಡೆದಿದೆ. ಅಡ್ಕತ್ತಬೈಲ್ , ಕರಂದಕ್ಕಾಡ್ ನಲ್ಲಿ ಹಲವು ಹೊಂಡಗಳು ಉಂಟಾಗಿದ್ದು , ಸಂಚಾರ ದುಸ್ತರವಾಗುತ್ತಿದೆ.

ಮೊಗ್ರಾಲ್ ಪುತ್ತೂರು , ಚೌಕಿ , ಹೊಸಬಸ್ಸು ನಿಲ್ದಾಣ ಪರಿಸರ ಮೊದಲಾದೆಡೆ ಹೊಂಡಗಳು ಪ್ರಯಾಣಿಕರ ತಾಳ್ಮೆ ಪರೀಕ್ಷಿಸುತ್ತಿದೆ. ಮಳೆ ಬರುವ ಹಾಗೂ ರಾತ್ರಿ ಸಂದರ್ಭಗಳಲ್ಲಿ ಚಾಲಕರಿಗೆ ಈ ಹೊಂಡಗಳು ಗಮನಕ್ಕೆ ಬರದೆ ಅಪಘಾತಕ್ಕೆ ಕಾರಣವಾಗುತ್ತಿದೆ.
ಬೈಕ್ ಸೇರಿದಂತೆ ಲಘು ವಾಹನಗಳಿಗೆ ಹೊಂಡಗಳು ಹೆಚ್ಚಿನ ಅಪಾಯ ವನ್ನುಂಟು ಮಾಡುತ್ತಿದೆ. ಬೈಕ್ ಗಳು ನಿಯಂತ್ರಣ ತಪ್ಪಿ ಅಪಘಾತಕ್ಕೆ ಸಿಲುಕುತ್ತಿವೆ.

national-highway

ಕಳೆದ ಮಳೆಗಾಲದಲ್ಲಿ ಕುಂಬಳೆ ಯಿಂದ ತಲಪಾಡಿ ತನಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ಬಾರಿ ಕುಂಬಳೆ ಮೊಗ್ರಾಲ್ ನಿಂದ ಕಾಸರಗೋಡು ತನಕ ರಸ್ತೆ ಹದೆಗೆಟ್ಟಿದೆ. ವರ್ಷ೦ಪ್ರತಿ ಮಳೆಗಾಲದಲ್ಲಿ ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಕೊನೆ ಇಲ್ಲದಂತಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English