ವರ್ಕಾಡಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

9:43 PM, Friday, July 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

VRA-Research-Sub-Centreಮಂಜೇಶ್ವರ: ಇಲ್ಲಿನ ವರ್ಕಾಡಿ ಪ್ರಾದೇಶಿಕ ಕೃಷಿ ಸಂಶೋಧನಾ ಉಪಕೇಂದ್ರಕ್ಕೆ ಪಿಲಿಕ್ಕೋಡು ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದರು. ಕಳೆದ ದಶಕಗಳಿಂದ ಅನಾಸ್ಥೆಯಲ್ಲಿರುವ ಪ್ರಸ್ತುತ ಕೇಂದ್ರಕ್ಕೆ ಪುನಶ್ಚೇತನ ನೀಡಬೇಕೆನ್ನುವ ನಿರಂತರ ಬೇಡಿಕೆಯನ್ನು ಮನ್ನಿಸಿ ಅಧಿಕಾರಿಗಳ ನಿಯೋಗವೊಂದು ಪ್ರಸ್ತುತ ಸ್ಥಳಕ್ಕೆ ಭೇಟಿ ನೀಡಿ ವರದಿ ಸಂಗ್ರಹಿಸಿತು. ಪಿಲಿಕ್ಕೋಡು ಕೃಷಿ ಶಂಶೋಧನಾ ಕೇಂದ್ರದ ಎಡಿಆರ್ ಡಾ,ಅಬ್ದುಲ್ ಕರೀಂ ನೇತೃತ್ವದ ತಂಡದಲ್ಲಿ ಸಹಾಯಕ ಉಪನ್ಯಾಸಕ ಪಿ.ಕೆ.ರಿತೇಶ್, ಡಾ.ಶಶಿಕಾಂತ್, ಪಾರ್ಮ್ ಸುಪರಿಟೆಂಡೆಂಟ್ ಎಂ.ವಿ. ಪ್ರೇಮರಾಜನ್, ಕೃಷಿ ಭವನದ ಸಹಾಯಕ ಅಧಿಕಾರಿ ಎ.ವಿ.ರಾಧಾಕೃಷ್ಣ, ಮುಂತಾದವರು ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಮಜೀದ್ , ಶಾಂತಿ ಸೇನಾ ಫೌಂಢೇಶನ್‌ನ ಉಮ್ಮರ್ ಬೋರ್ಕಳ ಅಧಿಕಾರಿಗಳಿಗೆ ಉಪಕೇಂದ್ರದ ಅನಾಸ್ಥೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಸುಮಾರು 16.5 ಎಕರೆ ವಿಸ್ತಿರ್ಣದಲ್ಲಿ ಕಾರ್ಯಾಚರಿಸುತ್ತಿರುವ ವರ್ಕಾಡಿಯ ಕೃಷಿ ಸಂಶೋಧನಾ ಉಪಕೇಂದ್ರ ಕಳೆದ ಹತ್ತು ವರ್ಷಗಳಿಂದ ಚಟುವಟಿಕೆ ಸ್ಥಗಿತಗೊಂಡಿದ್ದು, ಉಪಯೋಗಶೂನ್ಯವಾಗಿದೆ. ಈ ಬಗ್ಗೆ ಸರಕಾರಕ್ಕೆ , ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಅದೆಷ್ಟೋ ಬಾರಿ ಮನವಿಯನ್ನು ಸಲ್ಲಿಸಿದರೂ ಯವುದೇ ಪ್ರಗತಿ ಕಂಡಿರಲಿಲ್ಲ. ಇದೀಗ ವರ್ಕಾಡಿ ಗ್ರಾಮ ಪಂಚಾಯತು ಪ್ರಸ್ತುತ ಸ್ಥಳವನ್ನು ಪಂಚಾಯತು ಉಪಯೋಗಕ್ಕೆ ಬಿಟ್ಟುಕೊಡುವಂತೆ ತೀರ್ಮಾನ ತೆಗೆದು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಎಚ್ಚೆತ್ತ ಶಂಶೋಧನಾ ಕೇಂದ್ರದ ಅಧಿಕಾರಿಗಳು ಈ ಕೇಂದ್ರಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ.

ತುಳುನಾಡಿನ ಕೃಷಿಕರ ಬಹು ನಿರೀಕ್ಷೆಯಲ್ಲಿ ಪ್ರಾರಂಭಗೊಂಡ ಈ ಕೇಂದ್ರವನ್ನು ಜನೋಪಯೋಗಿಯಾಗಿ ಪರಿವರ್ತಿಸುವಂತೆಯೂ, ಜನಸಹಭಾಗಿತ್ವದೊಂದಿಗೆ ಕೇಂದ್ರವನ್ನು ಮುನ್ನಡೆಸುವ ಬಗ್ಗೆ ಸಮಗ್ರವಾಗ ಯೋಜನೆಯನ್ನು ರೂಪಿಸಿಬೇಕೆಂದು ಜಿ.ಪ.ಸ್ಥಾಯೀ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತು ಅಧ್ಯಕ್ಷರು ಅಧಿಕಾರಿಗಳನ್ನು ಒತ್ತಾಯಿಸಿದರು. ಮಾತ್ರವಲ್ಲ ಪಂಚಾಯತಿನ ಆಸುಪಾಸಿನ ಸ್ಥಳವನ್ನು ಪಂಚಾಯತು ಚಟುವಟಿಕೆಗಳಿಗೆ ಬಿಟ್ಟುಕೊಡುವಂತೆಯೂ ಭಿನ್ನವಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English