ಮಂಗಳೂರು : ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವನೆ ಮಾಡಿರುವ ವಿವಾದದ ಸುಳಿಗೆ ಸಿಲುಕುತ್ತಿದ್ದಂತೆಯೇ ಕಾರ್ಪೊರೇಷನ್ ಬ್ಯಾಂಕ್ ಆಕೆಯನ್ನು ರಾಯಬಾರಿ (ಬ್ಯ್ರಾಂಡ್ ಅಂಬಾಸಿಡರ್) ಜಾಹೀರಾತಿನಿಂದ ವಿಮುಖಗೊಳಿಸಿದೆ.
ಮಂಗಳೂರು ಸಹಿತ ದೇಶದಾದ್ಯಂತ ಆಕೆಯ ಭಾವಚಿತ್ರವಿದ್ದ ಹೋರ್ಡಿಂಗ್ ಗಳನ್ನು ತೆಗೆಯಲು ಸೂಚನೆ ಕೊಟ್ಟಿದೆ.ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಅಶ್ವಿನಿ ಅಕ್ಕುಂಜೆಯವರ ಹೋರ್ಡಿಂಗ್ ಮಾಯವಾಗಿವೆ.
ಶನಿವಾರ ಆಕೆಯ ಬಿ ಸ್ಯಾಂಪಲ್ ಪರೀಕ್ಷೆಯ ಫಲಿತಾಂಶ ಹೊರಬೀಳಲಿದ್ದು ಮುಂದೇನು ಎನ್ನುವುದು ಕುತೂಹಲದಾಯಕ. ಹಳ್ಳಿ ಹುಡುಗಿಯ ಸಾಧನೆಗೆ ದೇಶವೇ ಅಂದು ಕೊಂಡಾಡಿತ್ತು.
Click this button or press Ctrl+G to toggle between Kannada and English