ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕು: ಜಯಶರ್ಮಿಳಾ

12:57 PM, Tuesday, July 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Anniversaryಉಪ್ಪಳ: ಸರಕಾರ ಇಂದು ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಸ್ಪಷ್ಟ ಅರಿವಿನ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ವಿದ್ಯಾಭ್ಯಾಸದ ಮಟ್ಟ ಮಹಿಳೆಯರಲ್ಲಿ ಸಮಾಧಾನಕರ ಮಟ್ಟದಲ್ಲಿದ್ದರೂ ದೌರ್ಜನ್ಯಗಳಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗದಿರುವುದು ಖೇದಕರವಾಗಿದ್ದು,ಈ ನಿಟ್ಟಿನಲ್ಲಿ ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕಿದೆಯೆಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಜಯಶರ್ಮಿಳಾ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಕುಬಣೂರಲ್ಲಿ ಕಾರ್ಯಾಚರಿಸುತ್ತಿರುವ ಚಿನ್ಮಯೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವನ್ನು ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸ್ವಾವಲಂಬನೆ,ಸ್ವ ಉದ್ಯೋಗಗಳ ಜೊತೆಗೆ ವರ್ತಮಾನದ ವಿಚಾರಗಳ ಬಗ್ಗೆಯೂ ಮಹಿಳೆಯರು ಗಮನ ಹರಿಸಬೇಕಾದ ಅಗತ್ಯವಿದೆ.ರಾಜಕೀಯ,ಸಾಮಾಜಿ,ಧಾರ್ಮಿಕ ಕ್ಷೇತ್ರಗಳಲ್ಲಿ ನಮ್ಮ ಇರವನ್ನು ತೋರ್ಪಡಿಸಿಕೊಂಡು ಕುಟುಂಬ, ಸಂಸಾರವನ್ನು ಸಮತೋಲನದಲ್ಲಿ ಮುನ್ನಡೆಸುವ ಹೊಣೆಯಲ್ಲಿ ಇನ್ನಷ್ಟು ಸಂತಸದ ಯಶಸ್ಸನ್ನು ಕಂಡೊಕೊಳ್ಳಬೇಕೆಂದು ಅವರು ತಿಳಿಸಿದರು.ಸ್ಥಳೀಯಾಡಳಿತ ಸಂಸ್ಥೆಗಳ ಆಗುಹೋಗುಗಳ ಬಗ್ಗೆ ಅರಿವಿದ್ದು,ಸಕಾಲದಲ್ಲಿ ಸರಕಾರದ ಸೌಲಭ್ಯಗಳನ್ನು ಸದಾಶಯದೊಡನೆ ಬಳಸಿಕೊಂಡು ಮುಂದುವರಿಯಬೇಕಾದ ಅಗತ್ಯವಿದೆಯೆಂದು ಅವರು ಅಭಿಪ್ರಾಯಪಟ್ಟರು.

ಕುಬಣೂರು ಶ್ರೀರಾಮ ಎಯುಪಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಅಪರ್ಣಾ,ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ದಾಕ್ಷಾಯಿಣಿ,ಅಡ್ವ.ರೇಷ್ಮಾ,ಹಾಗೂ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ಮತ್ತು ವಲಯ ಅಧ್ಯಕ್ಷ ಗಂಗಾಧರ ಕೊಂಡೆವೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬಳಿಕ ಹೆಣ್ಮಕ್ಕಳ ಕಡ್ಡಾಯ ಉಚಿತ ಶಿಕ್ಷಣ ಹಕ್ಕು,ಮಳೆಗಾಲದ ಸಾಂಕ್ರಾಮಿಕ ರೋಗ ನಿಯಂತ್ರಣ,ಸರಕಾರಿ ಕಾನೂನಿನಲ್ಲಿ ಮಹಿಳೆಯರಿಗೆ ನೀಡಲ್ಪಟ್ಟಿರುವ ವಿವಿಧ ಹಕ್ಕುಗಳ ಬಗ್ಗೆ ಉಪನ್ಯಾಸಕಿ ಅಪರ್ಣಾ,ಆರೋಗ್ಯ ಸಹಾಯಕಿ ದಾಕ್ಷಾಯಿಣಿ ಹಾಗೂ ಕೌನ್ಸಿಲರ್ ರೇಷ್ಮಾ ತರಗತಿಗಳನ್ನು ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು.ಬಳಿಕ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜ್ಞಾನ ವಿಕಾಸ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಆಶಾಚಂದ್ರ ದೇವಾಡಿಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.ಸೇವಾ ಪ್ರತಿನಿಧಿ ಅಶೋಕ ಆಚಾರ್ಯ ವರದಿ ಮಂಡಿಸಿದರು.ಪುಷ್ಪಾವತಿ ಸ್ವಾಗತಿಸಿ,ಮೇಲ್ವಿಚಾರಕಿ ಶೋಭಾ ಐ.ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English