ಕುಖ್ಯಾತ ಕಳವು ಆರೋಪಿಗಳ ಕಾರು ಮಗುಚಿಬಿದ್ದು ಗಾಯಾಳುಗಳು ಆಸ್ಪತ್ರೆಯಿಂದ ಪರಾರಿ

10:32 AM, Friday, July 22nd, 2016
Share
1 Star2 Stars3 Stars4 Stars5 Stars
(No Ratings Yet)
Loading...

Kumbaleಕುಂಬಳೆ: ಕುಖ್ಯಾತ ಕಳವು ಆರೋಪಿ ಹಾಗೂ ತಂಡ ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿಬಿದ್ದ ಘಟನೆ ಬುಧವಾರ ಮಧ್ಯರಾತ್ರಿ ಕುಂಬಳೆ ಸಮೀಪದ ಶಾಂತಿಪಳ್ಳದಲ್ಲಿ ನಡೆದಿದೆ. ಈವೇಳೆ ನಾಗರಿಕರು ಆಸ್ಪತ್ರೆಗೆ ತಲುಪಿಸಿದ ಗಾಯಾಳುಗಳ ಪೈಕಿ ಇಬ್ಬರು ಆಸ್ಪತ್ರೆಯಿಂದ ಪರಾರಿಯಾ ಗಿದ್ದಾರೆ. ಮೂವರು ಅಪಘಾತ ತಕ್ಷಣವೇ ಪರಾರಿಯಾಗಿದ್ದಾರೆ. ಇನ್ನೋರ್ವ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾತ್ರಿ ೧.೪೫ರ ವೇಳೆ ಕುಂಬಳೆ-ಬದಿಯಡ್ಕ ರಸ್ತೆಯ ಶಾಂತಿಪಳ್ಳ ತಿರುವಿನಲ್ಲಿ ಅಬಕಾರಿ ಕಚೇರಿಯ ಸಮೀಪ ಅಪಘಾತ ನಡೆದಿದ್ದು,ಸ್ಥಳೀಯ ಹಾರಿಸ್ ಎಂಬವರ ಮನೆಯ ಮೇಲೆ ಕಾಞಂಗಾಡ್ ಆರ್.ಟಿ.ಒ ಕಚೇರಿಯಲ್ಲಿ ನೋಂದಾವಣೆ ಹೊಂದಿದ ಕಾರು ಮಗುಚಿಬಿದ್ದಿದೆ. ಇದರಿಂದ ಕಾಂಕ್ರೀಟ್ ಮನೆಯ ಮುಂಭಾಗದ ಛಾವಣಿ ಹಾನಿಗೀಡಾಗಿದೆ.

ಕಾರು ಮಗುಚಿ ಬಿದ್ದ ಸದ್ದುಕೇಳಿ ಮನೆಯವರು ಎಚ್ಚೆತ್ತು ಬೆಳಕು ಹಾಯಿಸಿದಾಗ ಅಪಘಾತಕ್ಕೀಡಾದ ಕಾರಿನಿಂದ ಮೂವರು ಓಡಿ ಪರಾರಿಯಾಗಿದ್ದಾರೆ. ಈವೇಳೆ ಗಾಯಗೊಂಡು ಕಾರಿನೊಳಗೆ ಸಿಲುಕಿದ ಮೂವರನ್ನು ಮನೆಯವರು ಹಾಗೂ ನಾಗರಿಕರು ಸೇರಿ ಹೊರಕ್ಕೆ ತೆಗೆದು ಕುಂಬಳೆ ಸಹಕಾರಿ ಆಸ್ಪತ್ರೆಗೆ ತಲುಪಿಸಿದರು. ಆದರೆ ಗಾಯಾಳುಗಳು ಆಸ್ಪತ್ರೆಯಲ್ಲಿ ಹೆಸರು, ಮತ್ತಿತರ ಮಾಹಿತಿ ತಿಳಿಸಲು ಮುಂದಾಗಲಿಲ್ಲ. ಇದು ಸಂಶಯ ಸೃಷ್ಟಿಯಾಗಲು ಕಾರಣವಾಯಿತು. ಇದೇ ವೇಳೆ ವಿಷಯ ತಿಳಿದು ಪೊಲೀಸರು ತಲುಪುವ ಸಾಧ್ಯತೆಯಿ ದೆಯೆಂದು ಮನಗಂಡ ಗಾಯಾಳುಗಳ ಪೈಕಿ ಇಬ್ಬರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ಅಡಿಶನಲ್ ಎಸ್.ಐ ಕೃಷ್ಣನ್‌ರ ನೇತೃತ್ವದಲ್ಲಿ ಪೊಲೀಸರು ತಲುಪುವಷ್ಟರಲ್ಲಿ ಬಿಜು ಎಂಬಾತ ಮಾತ್ರವೇ ಆಸ್ಪತ್ರೆಯಲ್ಲಿದ್ದನು. ಈತನಿಂದ ಪರಾರಿಯಾದವರ ಮಾಹಿತಿ ಪೊಲೀಸರಿಗೆ ಲಭಿಸಿದೆ. ಬಳಿಕ ಈತನನ್ನು ಕಾಸರಗೋಡಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

Kumbale

ಕಾರಿನಿಂದ ಲಭಿಸಿದ ಆರ್.ಸಿ ಮಾಲಕನ ಫೋನ್ ನಂಬ್ರದಲ್ಲಿ ಪೊಲೀಸರು ಸಂಪರ್ಕಿಸಿದ್ದಾಗ ಕಾರು ಕಾಞಂಗಾಡ್ ನಿವಾಸಿಯದ್ದೆಂದೂ, ವಿವಾಹಕ್ಕೆ ಹೋಗಲೆಂದು ತಿಳಿಸಿ ಕಾರನ್ನು ತಂಡ ಪಡೆದುಕೊಂಡಿರು ವುದಾಗಿ ಈತ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದವರ ಪೈಕಿ ಓರ್ವ ಹಲವಾರು ಪ್ರಕರಣಗಳಲ್ಲಿ ಆರೋಪಿ ಯಾದ ವ್ಯಕ್ತಿಯಾಗಿ ದ್ದಾನೆಂದು ದೃಢೀಕರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ವೇಳೆ ಇವರು ಕಾರಿನಲ್ಲಿ ಯಾವ ಕಡೆಗೆ ತೆರಳು ತ್ತಿದ್ದರೆಂದೂ, ಅವರ ಉದ್ದೇಶ ವೇನೆಂದೂ, ಪರಾರಿ ಯಾದವರು ಯಾರೆಂಬ ಬಗ್ಗೆ ಪೊಲೀ ಸರು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English