ಬಹುಭಾಷಾ ಭೂಮಿಯಲ್ಲಿ ತುಳು ಭಾಷೆ ಸಂಸ್ಕೃತಿ ಸಮ್ಮಿಳಿತವಾಗಿದೆ-ಕೋಳಾರು ಸತೀಶ್ಚಂದ್ರ ಭಂಡಾರಿ

11:57 AM, Tuesday, July 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

Thulu-lipi-karyagaraಉಪ್ಪಳ: ಮನಸ್ಸಿಗೆ ಭಾರೀ ಶಕ್ತಿಯಿದ್ದು,ಬುದ್ಧಿ ಶಕ್ತಿಯೊಂದಿಗೆ ಇಚ್ಛಾಶಕಿಯೂ ಸಮ್ಮಿಳಿತವಾದರೆ ಸಮಾಜಮುಖಿ ಕಾರ್ಯಗಳನ್ನು ಸುಲಲಿತವಾಗಿ ಮಾಡಬಹುದು ಎಂದು ಕ್ಯಾಂಪ್ಕೊ ನಿರ್ದೇಶಕ ಕೋಳಾರ ಸತಿಶ್ಚಂದ್ರ ಭಂಡಾರಿ ಹೇಳಿದರು.

ಪೈವಳಿಕೆ ನಗರ ಶಾಲೆಯಲ್ಲಿ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ತುಳು ಲಿಪಿ ಕಾರ‍್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಸರಗೋಡು ಜಿಲ್ಲೆ ಸಪ್ತ ಭಾಷಾ ಸಂಗಮಭೂಮಿ. ಇಲ್ಲಿ ಕೇವಲ ಏಳು ಭಾಷೆಗಳನ್ನು ಮಾತ್ರವೇ ಮಾತನಾಡುವವರಿಲ್ಲ, ತುಳು ಉರ್ದು ಮರಾಠಿ ಕೊಂಕಣಿ ಸಹಿತ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿದ್ದು, ಎಲ್ಲರಲ್ಲೂ ತುಳು ಭಾಷೆ ಸಂಸ್ಕೃತಿ ಸಮ್ಮಿಳಿತವಾಗಿದೆ ಎಂದರು.

ಸತ್ಯಮೇವ ಜಯತೇ ಟ್ರಸ್ಟಿನ ಕಾರ್ಯವ್ಯಾಪ್ತಿ ಮಂಜೇಶ್ವರ ತಾಲೂಕಿನವರೆಗೂ ಹಬ್ಬಿರುವುದು ಸಂತಸದ ಸಂಗತಿ. ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳುವಂತೆ ದೇಶದ ಶಕ್ತಿ ಯುವಜನತೆ, ಯುವಜನತೆಯ ಇಚ್ಛಾಶಕ್ತಿಯಿಂದ ಸಮಾಜಮುಖಿ ಚಿಂತನೆಯಿಂದ ದೇಶ ಅಭಿವೃದ್ಧಿಯ ಮೇರು ಶಿಖರವನ್ನು ಏರಬಹುದು ಎಂದರು. ಕೇವಲ ಒಂದು ವರ್ಷದಲ್ಲಿ ವಿವಿಧ ರೀತಿಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿ ದೀನರಿಗೆ ಅಶಕ್ತರಿಗೆ ನೆರವಾದ ಸತ್ಯಮೇಜ ಜಯತೇ ಕಾರ್ಯಗಳನ್ನು ಶ್ಲಾಘಿಸಿದರು.

ತುಳು ಲಿಪಿ ಕಾರ್ಯಗಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು. ತುಳು ಲಿಪಿ ಹಾಗೂ ಭಾಷೆಯ ಮೇಲೆ ಹೊಸ ಅವಿಷ್ಕಾರ ಸಂಶೋಧನೆ ನಡೆಸಿದ ದಿ.ಡಾ.ವೆಂಕಟರಾಜ ಪುಣಚಿತ್ತಾಯ ಅವರನ್ನು ಸ್ಮರಿಸಿದರು.

ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ ಎ. ನೀರುಮಾರ್ಗ ಕಾರ‍್ಯಾಗಾರಕ್ಕೆ ಶುಭಹಾರೈಸಿದರು. ರಘುನಾಥ ಶೆಟ್ಟಿ ಕೊಮ್ಮಂಗಳ ಮಾತನಾಡಿ ಟ್ರಸ್ಟ್ ಮೂಲಕ ಸುಮಾರು ೧೬ ಲಕ್ಷ ಸಂಗ್ರಹಿಸಿ, ಬಡವರಿಗೆ ದೀನ ಅಶಕ್ತರಿಗೆ ನೆರವು ನೀಡಿರುವುದು ಪ್ರಶಂಸನೀಯವಾಗಿದ್ದು, ಮುಂಬರುವ ವರ್ಷಗಳಲ್ಲಿ ಟ್ರಸ್ಟ್ ಇನ್ನೂ ಉತ್ತಮವಾಗಿ ಸೇವಾ ಕೈಂಕರ್ಯದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿ ರಾಜ್ಯವಷ್ಟೇ ಅಲ್ಲದೆ ದೇಶದಲ್ಲಿ ಉತ್ತಮ ಹೆಸರು ಗಳಿಸಲಿ ಎಂದು ಹಾರೈಸಿದರು.

ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನ ಹಾಸ್ಯ ಕಲಾವಿದ ಹಾಗೂ ನಮ್ಮ ತುಳುನಾಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಕಡಬ ದಿನೇಶ್ ರೈ, ತುಳು ಲಿಪಿ ಶಿಕ್ಷಕರಾದ ಹಾಗೂ ನಮ್ಮ ತುಳುನಾಡ್ ಸ್ಥಾಪಕಾಧ್ಯಕ್ಷ ಜಿ.ವಿಎಸ್ ಉಳ್ಳಾಲ್, ದಿವ್ಯಶ್ರೀ ರೈ ಹಾಗೂ ಸತ್ಯಮೇಜ ಜಯತೇ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಅಶ್ವಥ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಉಮೇಶ್ ಭಟ್ ಧನ್ಯವಾದವಿತ್ತರು.

Thulu-lipi-karyagara

ತುಳು ಬ್ಯಾಗ್ ಅನಾವರಣ
ಕಾರ್ಯಕ್ರಮದಲ್ಲಿ ವಿನೂತನ ತುಳು ಬ್ಯಾಗ್ ಅನಾವರಣಗೊಳಿಸಲಾಯಿತು. ತುಳು ಭಾಷೆಯ ಮೇಲಿನ ಅಭಿಮಾನ ಹಾಗೂ ತುಳು ಲಿಪಿಯ ಬಗ್ಗಗಿನ ಮಾಹಿತಿ, ಆಸಕ್ತರನ್ನು ತುಳು ಲಿಪಿಯತ್ತ ಸುಲಭವಾಗಿ ಆಕರ್ಷಿಸುವ ಸಲುವಾಗಿ ಬ್ಯಾಗ್ ಅನ್ನು ಹೊರತರಲಾಗಿದೆ. ವಿಶೇಷ ವಿನ್ಯಾಸ ಹೊಂದಿರುವ ತುಳು ಬ್ಯಾಗ್ ಮೇಲ್ಭಾಗದಲ್ಲಿ ತುಳು ಲಿಪಿ ಬರಹಗಳಿದ್ದು ಬಹಳ ಆಕರ್ಷಕವಾಗಿದೆ.

ನಮ್ಮ ತುಳುನಾಡ್ ಸಂಸ್ಥೆಯ ಜಿವಿಎಸ್ ಉಳ್ಳಾಲ್ ತುಳು ಬ್ಯಾಗ್ ಅನ್ನು ಹೊರ ತಂದಿದ್ದು. ತುಳು ಲಿಪಿ ಕಾರ‍್ಯಾಗಾರವನ್ನು ಉದ್ಘಾಟಸಿದ ಕೋಳಾರು ಸತೀಶ್ಚಂದ್ರ ಭಂಡಾರಿ ಸಮ್ಮುಖದಲ್ಲಿ ಬ್ಲಾಗ್‌ನ್ನು ಅನಾವರಣಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ವಿವಿಧ ರೀತಿಯ ತುಳು ಲಿಪಿಯುಳ್ಳ ಆಕರ್ಷಕ ವಿನ್ಯಾಸಗಳುಳ್ಳ ಲ್ಯಾಪ್‌ಟಾಪ್ ಬ್ಯಾಗ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ ವಿವಿಧ ನಮೂನೆಗಳ ಬ್ಯಾಗ್‌ಗಳನ್ನು ಹೊರ ತರುವ ಉದ್ದೇಶವಿದೆ ಎಂದು ಜಿವಿಎಸ್ ಉಳ್ಳಾಲ್ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English