“ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ’ಸಿರಿಗನ್ನಡ ವೇದಿಕೆ’ಯನ್ನು ಬಲಪಡಿಸಿ”: ವಿ.ಬಿ.ಕುಳಮರ್ವ

3:40 PM, Tuesday, July 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

Kasaragodu ಕುಂಬಳೆ: ಅಚ್ಚಗನ್ನಡದ ನೆಲವಾದ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಕನ್ನಡದ ಶಕ್ತಿ ಕ್ಷೀಣಿಸುತ್ತಾ ಬರುತ್ತಿದೆ. ಸರಕಾರವೂ ಕನ್ನಡಿಗರ ಹಿತರಕ್ಷಣೆಗೆ ಸ್ಪಂದಿಸುವುದಿಲ್ಲ.ಕನ್ನಡದ ಸಂಘಟನೆಗಳು ಹೆಚ್ಚಾದಷ್ಟೂ ಕನ್ನಡಭಾಷೆ ಸಾಹಿತ್ಯ,ಸಂಸ್ಕೃತಿಗಳ ಉನ್ನತಿಗೆ ಶ್ರಮಿಸುವ ಕೈಗಳಿಗೆ ಅಧಿಕ ಬಲ ಬರುವುದರಲ್ಲಿ ಸಂಶಯವಿಲ್ಲ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಕಳೆದ ಹದಿಮೂರು ವರ್ಷಗಳಿಂದ ಕಾರ್ಯಾಚರಿಸಿಕೊಂಡು ಬರುತ್ತಿರುವ ’ಸಿರಿಗನ್ನಡ ವೇದಿಕೆ’ಯ ಕಾಸರಗೋಡು ಜಿಲ್ಲಾಘಟಕವೂ ಬಹಳಷ್ಟು ವೈವಿದ್ಯಮಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷರೂ ಜಿಲ್ಲಾಘಟಕ ಅಧ್ಯಕ್ಷರೂ ಆದ ವಿ.ಬಿ.ಕುಳಮರ್ವ ಅಭಿಪ್ರಾಯ ಪಟ್ಟರು.

ಮುಜುಂಗಾವು ವಿದ್ಯಾಪೀಠದಲ್ಲಿ ನಡೆದ ಸಿರಿಗನ್ನಡ ವೇದಿಕೆಯ ವಿವಿಧ ತಾಲೂಕು ಘಟಕಗಳ ರೂಪೀಕರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಸಿರಿಗನ್ನಡ ವೇದಿಕೆಯ ಜಿಲ್ಲಾ ಮಹಿಳಾಘಟಕವು ಸಶಕ್ತವಾಗಿದ್ದು ಮಂಜೇಶ್ವರ,ಕಾಸರಗೋಡು,ಹೊಸದುರ್ಗ ತಾಲೂಕು ಘಟಕಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತವಾಗಿರುವುದು ಕನ್ನಡಿಗರ ಭಾಗ್ಯ.ಕ್ರೀಯಾತ್ಮಕ ಚಟುವಟಿಕೆಗಳ ಮೂಲಕ ಘಟಕಗಳು ಕನ್ನಡ ಭಾಷೆ,ಸಂಸ್ಕ್ರತಿಯ ಸಂವರ್ಧನೆಗೆ ಕಾರ್ಯಪ್ರವೃತ್ತರಾಗಬೇಕೆಂದು ಅವರು ಕರೆ ನೀಡಿದರು.

ಮಂಜೇಶ್ವರ,ಕಾಸರಗೊಡು ಮತ್ತು ಹೊಸದುರ್ಗ ಘಟಕಗಳ ಅಧ್ಯಕ್ಷ ಸ್ಥಾನವನ್ನು ಕ್ರಮವಾಗಿ ಶಿವಕುಮಾರಿ ಕುಂಚಿನಡ್ಕ, ಪುಷ್ಪವೆಂಕಟಕೃಷ್ಣ ಭಟ್ ಗೋಳಿತ್ತಡ್ಕ, ಶಶಿಕಲಾಟೀಚರ್ ಹೊಸದುರ್ಗ ಅವರುಗಳಿಗೆ ಲಾಂಛನವನ್ನು ಪುಸ್ತಕಗಳೊಂದಿಗೆ ಹಸ್ತಾಂತರಿಸಿ ವಹಿಸಿಕೊಟ್ಟರು.

ಸಿರಿಗನ್ನಡ ವೇದಿಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ರಾಜ್ಯಮಹಿಳಾ ಘಟಕದ ಉಪಾಧ್ಯಕ್ಷೆ ವಿಜಯಾಸುಬ್ರಹ್ಮಣ್ಯ ಕುಂಬಳೆ, ಕಾಸರಗೋಡಿನ ಸ್ಥಿತಿ-ಗತಿಗಳನ್ನು ಕುರಿತು ವಿಶ್ಲೇಷಿಸುತ್ತಾ ಸಾದ್ಯವಿದ್ದಷ್ಟು ಹೆಚ್ಚಿನ ಕನ್ನಡಪರ ಚಟುವಟಿಕೆಗಳನ್ನು ನಡೆಸುವಂತೆ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಕಳೆದವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್‌ಗಳಿಸಿದ ಕು.ಅನುಷಾ ಮಯ್ಯ ಬಾಲಪ್ರತಿಭೆಯನ್ನು ವಿ.ಬಿ.ಕುಳಮರ್ವರು ಶಾಲುಹೊದೆಸಿ ಅಭಿನಂದಿಸಿದರು.ವೇದಿಕೆಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಶಾರದಾ ಕಾಡಮನೆ ಸ್ವಾಗತಿಸಿ,ಪಾರ್ವತಿ ಕೂಳಕ್ಕೋಡ್ಳು ವಂದನಾರ್ಪಣೆಗೈದರು.ಪ್ರೇಮಗಂಗಾ ಹಳೆಮನೆ ಪ್ರಾರ್ಥನೆಗೈದು,ಶಿವಕುಮಾರಿ ಕಾರ್ಯಕ್ರಮ ನಿರೂಪಿಸಿದರು.

image description

1 ಪ್ರತಿಕ್ರಿಯೆ - ಶೀರ್ಷಿಕೆ - “ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ’ಸಿರಿಗನ್ನಡ ವೇದಿಕೆ’ಯನ್ನು ಬಲಪಡಿಸಿ”: ವಿ.ಬಿ.ಕುಳಮರ್ವ

  1. Suhas, Tumkur

    VB Kulamarva avara kiru parichaya maadikodi.. Avara uru mathe avara thandhe mathe thayi bagge hage avara januma dinankadha bagge thilisi dayavittu….

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English