ನವದೆಹಲಿ : ಅಥ್ಲೀಟ್ ಆಟಗಾರ್ತಿ ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವಿಸಿರುವುದು ಬಿ ರಿಪೋರ್ಟ್ ನಿಂದ ಸಾಬೀತಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಕಿದ ಬಿ ರಿಪೋರ್ಟ್ ಪಾಸಿಟೀವ್ ಆಗಿದೆ. ಇದರಿಂದ ಅಶ್ವಿನಿಗೆ 2 ವರ್ಷ ನಿಷೇಧ ವಿಧಿಸುವ ಸಾಧ್ಯತೆ ಇದೆ.
ಬಿ ರಿಪೋರ್ಟ್ ಫಲಿತಾಂಶದಿಂದ ಅಶ್ವಿನಿ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿರುವುದರಿಂದ 2012ರ ಒಲಿಂಪಿಕ್ಸ್ ನಲ್ಲಿ ಅಶ್ವಿನಿ ಪಾಳ್ಗೊಳ್ಳುವುದು ದೂರದ ಮಾತಾಗಿದೆ. ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಅಥ್ಲೀಟ್ ಪ್ರಿಯಾಂಕಾ ಪನ್ವಾರ್ ಕೂಡಾ 2 ವರ್ಷ ಒಲಿಂಪಿಕ್ಸ್ ನಲ್ಲಿ ಆಡುವಂತಿಲ್ಲ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಜೂನ್ 27ರಂದು ಪಟಿಯಾಲದಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಅನಾಬಾಲಿಕ್ ಸ್ಟಿರಾಯ್ಡ ತೆಗೆದುಕೊಂಡಿರುವುದು ‘ಎ’ ಸ್ಯಾಂಪಲ್ ಪರೀಕ್ಷೆಯಿಂದ ಸಾಬೀತಾಗಿದೆ. ‘ಎ’ ಸ್ಯಾಂಪಲ್ ಪರೀಕ್ಷೆಯಲ್ಲಿ ‘ಮೆಟಾಬಾಲೈಟ್ಸ್ ಆಫ್ ಮೆತಂಡಿನಾನ್’ ಎಂಬ ಅಂಶ ಇರುವುದು ಪತ್ತೆಯಾಗಿದೆ. ತದನಂತರ ಕಳೆದ ವಾರ ಅವರನ್ನು ಮತ್ತೊಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ‘ಬಿ’ ಸ್ಯಾಂಪಲ್ ಪರೀಕ್ಷೆಯಲ್ಲೂ ಮದ್ದು ಸೇವಿಸಿರುವುದು ಸಾಬೀತಾಗಿದೆ.
Click this button or press Ctrl+G to toggle between Kannada and English