ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅನಾರೋಗ್ಯದಿಂದಾಗಿ ಬೆಲ್ಜಿಯಂನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಸಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರೊ. ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ಅವರು ಸಯ್ಯದ್ ಮದನಿ ದರ್ಗಾದಲ್ಲಿ ಪ್ರರ್ಥನೆ ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷ ಯು.ಕೆ. ಮೋನು ಕೋಟೆಪುರ, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮೊಹಮ್ಮದ್, ಸಹ ಕಾರ್ಯದರ್ಶಿ ನೌಶಾದ್ ಮೇಲಂಗಡಿ, ಸದಸ್ಯರಾದ ಆಸಿಫ್ ಅಬ್ದುಲ್ಲ, ಹಮ್ಮಬ್ಬ ಕೋಟೆಪುರ, ಪುರಸಭಾ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜ, ಯು.ಎ ಇಸ್ಮಾಯಿಲ್, ನಗರಸಭಾ ಸದಸ್ಯ ಮುಸ್ತಫಾ ಅಬ್ದುಲ್ಲಾ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English