ವಿಮಾನ ನಿಲ್ದಾಣ ಮತ್ತು ಬಿಜೈ ಕೆ.ಎಸ್.ಆರ್.ಟಿಸಿ ನಿಲ್ದಾಣ ಮಧ್ಯೆ ಸರಕಾರಿ ವೋಲ್ವೊ ಬಸ್

6:09 PM, Tuesday, July 12th, 2011
Share
1 Star2 Stars3 Stars4 Stars5 Stars
(No Ratings Yet)
Loading...

kdp meeting/ಕೆಡಿಪಿ ಸಭೆಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ  ತ್ರೈ ಮಾಸಿಕ ಕೆಡಿಪಿ ಸಭೆ ಸೋಮವಾರ ನಡೆಯಿತು.  ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುವಂತೆ ಬಸ್ಸಿನ ವ್ಯವಸ್ಥೆ  ಮಾಡುವಂತೆ ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು,  ಅದರಂತೆ ಗ್ರಾಮೀಣ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು  ಒದಗಿಸಲು  ಸಲ್ಲಿಸಿರುವ 4 ತಾತ್ಕಾಲಿಕ ಪರವಾನಿಗೆ ಅರ್ಜಿಗಳನ್ನು ಪರಿಗಣಿಸಿ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ, 78ಚಾಲಕರನ್ನು ನೇಮಿಸಲಾಗಿದ್ದು,  ಅದರಂತೆ ಬಸ್ಸುಗಳನ್ನು ಓಡಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೆಡಿಪಿ ಸಭೆಯಲ್ಲ್ಲಿ ತಿಳಿಸಿದರು.

ಜೆ.ಕೃಷ್ಣ ಪಾಲೆಮಾರ್ ಮಾತನಾಡಿ ಪರವಾನಗಿ ಪಡೆದು ಓಡಾಟ ನಡೆಸದಿರುವ ಖಾಸಗಿ ಬಸ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೆಎಸ್ಆರ್ ಟಿಸಿಯವರು ಪರವಾನಗಿ ಪಡೆದ ಎಲ್ಲಾ ಮಾರ್ಗಗಳಲ್ಲಿ ಬಸ್ ಓಡಾಟ ಆರಂಭಿಸಿದ ಬಳಿಕವಷ್ಟೇ ಹೊಸ ಪರವಾನಗಿಗಳನ್ನು ಮಂಜೂರು ಮಾಡಬೇಕೆಂದು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಾಯೋಗಿಕ ರಾತ್ರಿ ಬಸ್ ಸಂಚಾರವನ್ನು ನಗರದಲ್ಲಿ ಕೂಡಲೇ ಜಾರಿಗೆ ತರಲಾಗುವುದು ಎಂದು ಸಚಿವ ಪಾಲೆಮಾರ್ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಜರಿರುವುದರೊಂದಿಗೆ , ಸರಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಬಡವರಿಗೆ ಮನೆ ನಂಬ್ರ ನೀಡುವ ಬಗ್ಗೆ  ಚರ್ಚೆ ಸಭೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು, ವಿಧಾನಸಭಾ ಉಪಾಧ್ಯಕ್ಷ ಎನ್.ಯೋಗೀಶ ಭಟ್,ಶಾಸಕರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯ ಸತೀಶ್ ಕುಂಪಲ ಮೊದಲಾದವರು ಭಾಗವಹಿಸಿದ್ದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಿಜೈ ಕೆ.ಎಸ್.ಆರ್.ಟಿಸಿ ನಿಲ್ದಾಣ ಮಧ್ಯೆ ಸರಕಾರಿ ಬಸ್ ವೋಲ್ವೊ ಜುಲೈ 15ರಿಂದ  ಸಂಚಾರ  ಪ್ರಾರಂಭಿಸಲಿದೆ. ಎಂದು ಜಿಲ್ಲಾಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ ಸಭೆಗೆ ತಿಳಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ಭೂ ಸ್ವಾಧೀನ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪಾಧ್ರಿಕಾರದ ನಿರ್ದೇಶಕ ಎಂ.ಆರ್.ವಾಸುದೇವ್ ವಿನಂತಿಸಿದರು.

ಪುನರ್ವಸತಿ ಮತ್ತು ಭೂ ಸ್ವಾನಕ್ಕಾಗಿ ರೂ.56 ಕೋಟಿ ಅವಶ್ಯಕತೆ ಇದೆ. ಮುಂಗಡಪತ್ರದಲ್ಲಿ ರೂ. 15 ಕೋಟಿ ಒದಗಿಸಲಾಗಿದೆ ಎಂದು ವಿವರಿಸಿದ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ , ಡೆಕ್ಕನ್ ಪಾರ್ಕನ್ನು ಭದ್ರತಾ ದೃಷ್ಟಿಯಿಂದ ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ಇದೆ. ಆದರೆ ಅದರ ಪರಿಹಾರ ಧನವನ್ನು ಯಾರು ಪಾವತಿಸಬೇಕೆಂಬುದು ನಿರ್ಧಾರವಾಗಿಲ್ಲ ಎಂದರು.

ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಟೀಲು -ಕಿನ್ನಿಗೋಳಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಅಭಯಚಂದ್ರ ಜೈನ್ ಆಗ್ರಹಿಸಿದರು.

ಸುವರ್ಣ ಭೂಮಿ ಯೋಜನೆಯಲ್ಲಿ ದಕ್ಷಿಣ ಕನ್ನಡದ ಭತ್ತ ಬೆಳೆಯುವ ಕೃಷಿಕರನ್ನು ಒಳಪಡಿಸಿಕೊಳ್ಳುವಂತೆ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು. ಸಾವಯವ ಕೃಷಿ ಮಿಷನ್ನಡಿ ರೈತರನ್ನು ಈ ಸೌಲಭ್ಯಕ್ಕೆ ಒಳಪಡಿಸ ಬಹುದಾಗಿದೆ.ಜಿಲ್ಲೆಯ ರೈತರಿಗೂ ಸೌಲಭ್ಯ ತಲುಪಬೇಕೆಂದರು.

ಜಿ.ಪಂಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್,ಉಪಾಧ್ಯಕ್ಷೆ ಧನಲಕ್ಷ್ಮೀ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಈಶ್ವರ ಕಟೀಲು, ನವೀನಕುಮಾರ್ ರೈಮೇನಾಲ, ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕ ಅಕಾರಿ ಕೆ.ಶಿವರಾಮೇ ಗೌಡ,ಮನಪಾ ಆಯುಕ್ತ ಡಾ.ವಿಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English