ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯಲ್ಲಿ “ಆಟಿಡೊಂಜಿ ದಿನ”

10:27 AM, Saturday, July 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Vidyarathnaಮಂಗಳೂರು: ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಿರಿ ಮುಡಿ ತುಳು ಸಂಘದ ಆಶ್ರಯದಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಆಚರಿಸಲಾಯಿತು. ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತೀ ವಿಜಯ ಕೃಷ್ಣಪ್ಪ ಪೂಜಾರಿ ಹಿಂಗಾರ ಅರಳಿಸುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು.

ಸಭಾಧ್ಯಕ್ಷೆಯನ್ನು ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಆಟಿ ತಿಂಗಳು ಹಿಂದಿನ ಕಾಲದಲ್ಲಿ ಬಹಳ ಕಷ್ಟದ ಸಮಯವಾಗಿದ್ದು ಯಾವುದೇ ಶುಭ ಕಾರ್ಯ, ಜಾತ್ರೆ ಇತ್ಯಾದಿ ಜರಗುತ್ತಿರಲಿಲ್ಲ ಎಂದರು. ಈ ಆಚರಣೆಯಲ್ಲಿ ಆಟಿ ತಿಂಗಳಿನ ಮಹತ್ವ ಮತ್ತು ವಾಸ್ತವವನ್ನು ತಿಳಿಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

Vidyarathnaಸಮಾರಂಭದಲ್ಲಿ ಶಾಲಾ ಕಾರ್ಯದರ್ಶಿ ಸೌಮ್ಯ.ಆರ್.ಶೆಟ್ಟಿ, ಮುಖ್ಯೋಪಾದ್ಯಾಯಿನಿ ನಯೀಮ್ ಹಮೀದ್, ಶಾಲಾ ಶಿಕ್ಷಕ ರವಿಕುಮಾರ ಕೋಡಿ ಉಪಸ್ಥಿತರಿದ್ದರು. ಶಿಕ್ಷಕ ನವೀನ್ ಸ್ವಾಗತಿಸಿದರು. ಶಿಕ್ಷಕಿ ಸೆಲಿನ್ ವಂದಿಸಿದರು. ಶಿಕ್ಷಕ ರಮೇಶ್ ಪೆರಾಡಿ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English