ರೈಲು ಮಿಸ್ ಆಗಿ ಬಸ್ಸಿನಲ್ಲಿ ಪ್ರಯಾಣಿಸಿ ಕೌತುಕ ಮೂಡಿಸಿದ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ

1:50 PM, Saturday, July 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Oommen-Chandyಕುಂಬಳೆ: ಪ್ರತಿ ಬಾರಿಯೂ ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿರುವ ಅತ್ಯಂತ ಸರಳ ವ್ಯಕ್ವಿತ್ವದ ಇದೀಗ ಮುಖ್ಯಮಂತ್ರಿ ಪಟ್ಟದಿಂದ ಇಳಿದು ನಿರ್ಲಿಪ್ತರಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರೈಲು ಮಿಸ್ ಆಗಿ ಜನ ಸಾಮಾನ್ಯನಂತೆ ಬಸ್ಸನ್ನೇರಿ ಪ್ರಯಾಣಿಸಿದ ಘಟನೆ ಮಂಗಳವಾರ ಕೊಲ್ಲಂನಲ್ಲಿ ನಡೆದಿದೆ.

ಇವರು ಮಂಗಳವಾರ ಬೆಳಗ್ಗೆ ತಿರುವಂತನಪುರದಿಂದ ಚೆನ್ನೈ ಮೈಲು ರೈಲುಗಾಡಿಯಲ್ಲಿ ಕೊಲ್ಲಂ ತಲುಪಿದ್ದು ಬಳಿಕ ಅನೇಕ ಸಾರ್ವಜನಿಕರ ಸಭೆಗಳಲ್ಲಿ ಭಾಗವಹಿಸಿದ್ದರು. ಕೊಲ್ಲಂನಲ್ಲಿ ನಡೆದ ಮಾಜಿ ಕಾಂಗ್ರೆಸ್ ನೇತಾರ ಕರುಮಾವಿಲ್ ಸುಕುಮಾರನ್ ಅವರ ಸಂಸ್ಮರಣಾ ದಿನಾಚರಣೆ, ಬಳಿಕ ಅಕಾಲಿಕ ಮರಣವನ್ನಿಪ್ಪಿದವರ ಮನೆಗೆ ಸಹಿತ ಅನೇಕ ಸಂತ್ರಸ್ಥರ ಮನೆಗೆ ಭೇಟಿ ನೀಡಿದ್ದರು. ಬಳಿಕ ತಿರುವನಂತಪುರ ತೆರಳಲು ಕೊಲ್ಲಂ ರೈಲು ನಿಲ್ದಾಣವನ್ನು 6.45ಕ್ಕೆ ತಲುಪುವಾಗ ಎಲ್ಲಾ ರೈಲುಗಳು ಆಗಲೇ ಹೊರಟು ಹೋಗಿದ್ದವು.

ಯಾವುದೇ ಗಲಿಬಿಲಿಗೊಳಗಾಗದೆ ನೇರ ಬಸ್ಸು ತಂಗುದಾಣಕ್ಕೆ ಆಗಮಿಸಿದ ಉಮ್ಮನ್ ಚಾಂಡಿ ಎರ್ನಾಕುಳಂನಿಂದ ಆಗಮಿಸಿ ತಿರುವಂತಪುರಕ್ಕೆ ಹೊರಟು ನಿಂತಿದ್ದ ಲೋ ಫ್ಲೋರ್ ಬಸ್ಸನ್ನೇರಿ ಡ್ರೆವರ್ ನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣ ಬೆಳೆಸಿದರು. ಆಕಸ್ಮಿಕವಾಗಿ ಓರ್ವ ಜನ ಸಾಮಾನ್ಯನಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳನ್ನು ಕಂಡು ಬಸ್ಸು ಸಿಬ್ಬಂದಿಗಳ ಸಹಿತ ಸಹ ಪ್ರಯಾಣಿಕರಲ್ಲಿ ಕೌತುಕವನ್ನು ಮೂಡಿಸಿದ್ದು, ಅನೇಕರ ಪರಿಚಯವನ್ನು ಉಮ್ಮನ್ ಚಾಂಡಿ ಪ್ರಯಾಣದಲ್ಲಿ ಮಾಡಿಕೊಂಡರು.

ಶಾಸಕರಿಗಿರುವ ಬಸ್ ಪಾಸ್ ಉಮ್ಮನ್ ಚಾಂಡಿಯವರಲ್ಲಿದ್ದುದರಿಂದ ದುಡ್ಡು ತೆರದೆ ಚಾಂಡಿ ಪ್ರಯಾಣಿಸಿದರು. ಸುದ್ದಿ ತಿಳಿದ ಮಾಧ್ಯಮದವರು ದಾರಿ ಮಧ್ಯೆ ಬಸ್ಸು ಹತ್ತಿ ಉಮ್ಮನ್ ಚಾಂಡಿಯವರ ಚಿತ್ರ ಸಹಿತ ಮಾಹಿತಿಗಳನ್ನು ಕಲೆ ಹಾಕಿದರು.

ಬಸ್ಸು ಸುಮಾರು 8.45ಕ್ಕೆ ತಿರುವಂತಪುರದಲ್ಲಿ ಬಂದಾಗಲೂ ಮಾಜಿ ಮುಖ್ಯಮಂತ್ರಿಗಳ ಸರಳ ನಡೆನುಡಿಯನ್ನು ತಿಳಿದ ಸುದ್ದಿ ಮಾಧ್ಯಮದವರು ನಿಲ್ದಾಣದಲ್ಲಿ ಕಾದು ನಿಂತಿದ್ದದ್ದು ವಿಶೇಷ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English