ಉಪ್ಪಳ: ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿದು ನಾಶಹೊಂದಿದ ಘಟನೆ ಉಪ್ಪಳ ಸಮೀಪದ ನಯಾಬಜಾರ್ ಪರಿಸರದಲ್ಲಿ ನಡೆದಿದೆ.
ನಯಾಬಜಾರ್ ಸಮೀಪದ ಅಜ್‌ಮಲಂಗ್ ರಸ್ತೆಯ ಮಜೀದ್ ಎಂಬವರ ನಿರ್ಮಾಣ ಹಂತದಲ್ಲಿದ್ದ ಕಾಂಕ್ರೀಟ್ ಮನೆ ಬುಧವಾರ ರಾತ್ರಿ ಸಂಪೂರ್ಣ ಕುಸಿದು ಬಿದ್ದಿದೆ.ರಾತ್ರಿ ಕುಸಿತವಾದ ಕಾರಣ ಜೀವಹಾನಿಗಳಾಗಿಲ್ಲ.ಸ್ಥಳಕ್ಕೆ ಉಪ್ಪಳ ಗ್ರಾಮಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಶಯಕ್ಕೆ ಕಾರಣ:
ಇತ್ತೀಚೆಗೆ ಜಿಲ್ಲೆಯಾದ್ಯಂತ ಹಲವು ನಿರ್ಮಾಣಗಳು ಏಕಾಏಕಿ ಕುಸಿದು ಬೀಳುತ್ತಿದ್ದು ಕಾಮಗಾರಿಯ ವೇಳೆ ನಡೆಸುವ ಕ್ಯೂರಿಂಗ್ ಸಮರ್ಪಕವಾಗಿಲ್ಲದ ಕಾರಣವೆಂಬ ಮಾತುಗಳು ಕೇಳಿಬಂದಿವೆ.ಜೊತೆಗೆ ಕಾಮಗಾರಿಗಳಿಗೆ ಗುತ್ತಿಗೆ ಪಡೆಯುವವರು ಕಾರ್ಮಿಕರೊಂದಿಗೆ ಸೇರಿ ಮೋಸ ನಡೆಸುತ್ತಿದ್ದಾರೆಂಬ ಬಗ್ಗೆ ಶಂಕೆಗಳೇರ್ಪಟ್ಟಿದೆ.
ವಿದ್ಯುತ್ ಇಲಾಖೆಯ ವಿದ್ಯುತ್ ಕಂಬಗಳನ್ನು ಕಳೆದ ಹಲವು ವರ್ಷಗಳಿಂದ ಮಂಜೇಶ್ವರದ ಕಂಪೆನಿಯೊಂದಕ್ಕೆ ನೀಡಲಾಗಿದ್ದು ಆ ಕಂಪೆನಿ ಪೂರೈಸುವ ವಿದ್ಯುತ್ ಕಂಬಗಳು ಪ್ರತಿವರ್ಷವೂ ಮುರಿದು ಬಿದ್ದು ಕೋಟ್ಯಂತರ ರೂ.ಗಳ ನಷ್ಟಕ್ಕೆ ಕಾರಣವಾಗಿತ್ತು.
ಇತ್ತೀಚೆಗೆ ವಿದ್ಯುತ್ ಇಲಾಖೆಯ ನೌಕರರೇ ಈ ಬಗ್ಗೆ ಧ್ವನಿಯೆತ್ತಿ ಮಂಜೇಶ್ವರದ ಕಂಪೆನಿಯು ಪೂರೈಸುವ ಕಂಬಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿತ್ತು.ಬಳಿಕ ಇಲಾಖೆ ಆ ಕಂಪೆನಿಯ ಕಂಬಗಳನ್ನು ಪಡೆಯುವುದರಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
Click this button or press Ctrl+G to toggle between Kannada and English