ಮಂಗಳೂರು: ಹಜ್ ವಿಮಾನ ಯಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ. 4ರಂದು ಪ್ರಾರಂಭವಾಗಲಿದೆ.
ಪ್ರತಿ ದಿನ ಬೆಳಗ್ಗೆ 11.05ಕ್ಕೆ ಈ ವಿಮಾನ ನಿಲ್ದಾಣದಿಂದ ಮದೀನಕ್ಕೆ ಏರ್ ಇಂಡಿಯಾ ವಿಮಾನ ನಿರ್ಗಮಿಸಲಿದೆ. ಒಟ್ಟು 560 ಮಂದಿ ಈ ವಿಮಾನ ನಿಲ್ದಾಣದ ಮೂಲಕ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಎ-320 ಮಾದರಿ ವಿಮಾನವಾಗಿದ್ದು, ಶಾರ್ಜಾ ಮಾರ್ಗವಾಗಿ ಪ್ರಯಾಣಿಸಲಿದೆ.
ಹಳೆಯ ಟರ್ಮಿನಲ್ ಬಿಲ್ಡಿಂಗ್‌ನ್ನು ಹಜ್ ಯಾತ್ರಿಕರ ನಿರ್ಗಮನಕ್ಕಾಗಿ ಬಳಸಲಾಗುತ್ತಿದ್ದು, ಈ ಬಗ್ಗೆ ಹಜ್ ಸಮಿತಿ ಸಕಲ ಸಿದ್ಧತೆಗಳನು ಮಾಡಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರ ಪತ್ರಿಕಾ ಪ್ರಕಟನೆ ತಿಳಿಸಿದೆ.
ಹಜ್ ಯಾತ್ರೆ ಕುರಿತು ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಲಾಗಿದೆ. ರಾಜ್ಯ ಹಜ್ ಕಮಿಟಿ ಅಧ್ಯಕ್ಷ ನಕ್ವಾ ಯಾಹ್ಯಾ, ಕಾರ್ಯನಿರ್ವಾಹಕ ಅಧಿಕಾರಿ ಸರ್‌ಫ್ರಾಜ್ ಖಾನ್, ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ, ಜಿಲ್ಲಾ ಹಜ್ ಕಮಿಟಿ ಅಧ್ಯಕ್ಷ ವೈ. ಮಹಮದ್ ಕುಂಞಿ ಮತ್ತು ಇತರ ಸದಸ್ಯರು, ವೈಮಾನಿಕ ಸಂಸ್ಥೆಗಳು, ಕಸ್ಟಮ್ಸ್, ಇಮಿಗ್ರೇಶನ್, ಸಿಐಎಸ್‌ಎಫ್, ಪೊಲೀಸ್ ಮತ್ತಿತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಎರಡನೇ ಹಂತದ ಹಜ್ ವಿಮಾನ ಯಾನ ಕಾರ್ಯಾಚರಣೆ ಸಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಪ್ರಕಟನೆ ವಿವರಿಸಿದೆ.
Click this button or press Ctrl+G to toggle between Kannada and English