ಸರ್ವಧರ್ಮ ಆಶಾಕಿರಣವಾಗಿರುವ ಅತ್ತೂರು ಚರ್ಚ್‌ ಲಕ್ಷಾಂತರ ಮಂದಿಗಳ ಇಷ್ಟಾರ್ಥಗಳನ್ನು ಈಡೇರಿಸಿದೆ: ಪ್ರಮೋದ್‌ ಮಧ್ವರಾಜ್‌

3:58 PM, Tuesday, August 2nd, 2016
Share
1 Star2 Stars3 Stars4 Stars5 Stars
(No Ratings Yet)
Loading...

Pramod-Madwarajಕಾರ್ಕಳ: ಇದೊಂದು ಐತಿಹಾಸಿಕ ದಿನ. ಸರ್ವಧರ್ಮ ಆಶಾಕಿರಣವಾಗಿರುವ ಈ ಅತ್ತೂರು ಚರ್ಚ್‌ ಲಕ್ಷಾಂತರ ಮಂದಿಗಳ ಇಷ್ಟಾರ್ಥಗಳನ್ನು ಈಡೇರಿಸಿದೆ. ಏಸು ಹೇಳಿದಂತೆ ಕಷ್ಟದಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯ ಮಾಡಿದರೆ ಅದು ನಮಗೆ ನಾವೇ ಮಾಡಿದ ಸಹಾಯ. ನಮಗೇ ಪುಣ್ಯ ಒಲಿಯುತ್ತದೆ ಎಂದು ಮೀನುಗಾರಿಕೆ, ಕ್ರೀಡೆ ಹಾಗೂ ಯುವಜನ ಸಬಲೀಕರಣ ಖಾತೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಸೋಮವಾರ ಕಾರ್ಕಳದ ನಿಟ್ಟೆ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಮಹಾದೇವಾಲಯ (ಕಿರು ಬಸಿಲಿಕ) ಎಂದು ಸಾರುವ ಸಂಭ್ರಮದ ಘೋಷಣೆ ಮತ್ತು ಸಮರ್ಪಣಾ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಈ ಐತಿಹಾಸಿಕ ಕಾರ್ಯಕ್ರಮ ಬರೀ ಭಾರತಕ್ಕಷ್ಟೇ ಅಲ್ಲ ಜಗತ್ತಿಗೂ ದಿವ್ಯ ಸಂದೇಶ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯ. ಸಚಿವನಾಗಿ ನಮ್ಮ ಜಿಲ್ಲೆಯ ಚರ್ಚ್‌ವೊಂದಕ್ಕೆ ಜಗತ್ತಿನ ಅತ್ಯುನ್ನತ ಮಾನ್ಯತೆ ಸಿಗುತ್ತಿರುವುದು ನೋಡಿ ಖುಷಿಯಾಗಿದೆ. ದೇಶದಾದ್ಯಂತ ಕೋಮು ಸಾಮರಸ್ಯ ಸಂದೇಶ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರದಿಂದಲೇ ಮೊಳಗಲಿ. ಬಸಿಲಿಕ ಘೋಷಣೆಯ ಐತಿಹಾಸಿಕ ಪರಿವರ್ತನೆ ಈ ದಿನದಿಂದಲೇ ಆರಂಭಗೊಳ್ಳಲಿ ಎಂದರು.

ತಿರುವನಂತಪುರಂನ ಸಿರೋ ಮಲಂಕರ ಕೆಥೋಲಿಕ್‌ ಸಭೆಯ ಮೇಜರ್‌ ಆರ್ಚ್‌ ಬಿಷಪ್‌ ಕಾರ್ಡಿನಲ್‌ ಬಸೇಲಿಯೋಸ್‌ ಕ್ಲಿಮಿಸ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸಿಲಿಕ ಎಂಬ ಸ್ಥಾನಮಾನವೇ ಪೋಪ್‌ ಜತೆಗೆ ವಿಶೇಷ ಭಾವನಾತ್ಮಕ ಬಂಧದ ಸಂಕೇತ. ಈ ಮಾನ್ಯತೆಯಿಂದ ಅತ್ತೂರು ಚರ್ಚ್‌ನ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತಷ್ಟು ಬೆಳೆಯಲಿ ಎಂದರು.

ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಕಾರ್ಕಳ ತಾಲೂಕಿನ ಅತ್ತೂರು ಚರ್ಚ್‌ ಇಂದು ವಿಶ್ವ ಮಟ್ಟದ ಮನ್ನಣೆ ಪಡೆದು, ಸರ್ವ ಧರ್ಮ ಸಮ್ಮಿಲನಕ್ಕೆ ಹೆಸರಾಗಿದೆ. ದೇಶದ 22 ಕ್ಷೇತ್ರಗಳಲ್ಲಿ ಅತ್ತೂರಿನ ಚರ್ಚ್‌ ಕೂಡ ಸೇರಿದೆ ಎಂದರೆ ಈ ಕ್ಷೇತ್ರದ ಶಾಸಕನಾಗಿ ಮೊದಲು ಖುಷಿ ಪಡುವವನು ನಾನು. ಅತ್ತೂರು ಕ್ಷೇತ್ರ ಬಸಿಲಿಕಾವಾಗಿ ಘೋಷಣೆಯಾಗಿದ್ದು ಇಡೀ ಕಾರ್ಕಳಕ್ಕೆ ಹೆಮ್ಮೆ ತರುವ ಸಂಗತಿ. ಮುಂದಿನ ದಿನಗಳಲ್ಲಿ ಚರ್ಚ್‌ ಸುತ್ತಮುತ್ತಲೂ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರಕಾರದ ವತಿಯಿಂದ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ದುಡಿಯುವುದಾಗಿ ಹೇಳಿದರು.

ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಮಾತನಾಡಿ, ಸರ್ವಧರ್ಮ ಸಮನ್ವಯ ಕ್ಷೇತ್ರದಲ್ಲಿರುವ ಪವಾಡ ಅದಮ್ಯವಾದುದು. ಇದೇ ಕಾರಣದಿಂದ ಕ್ಷೇತ್ರ ಜನತೆಯ ಕಂಗಳಲ್ಲಿ ಅಜರಾಮರವಾಗಿದೆ ಎಂದರು.

ಮುಂಬೈಯ ಆರ್ಚ್‌ ಬಿಷಪ್‌ ಹಾಗೂ ಸಿಸಿಬಿಐ ಅಧ್ಯಕ್ಷ ಪರಮಪೂಜ್ಯ ಕಾರ್ಡಿನಲ್‌ ಓಸ್ವಲ್ಡ್‌ ಗ್ರೇಶಿಯಸ್‌, ಎರ್ನಾಕುಳಂ ಸಿರೋ ಮಲಬಾರ್‌ ಕೆಥೋಲಿಕ್‌ ಸಭೆಯ ಮೇಜರ್‌ ಆರ್ಚ್‌ ಬಿಷಪ್‌ ಪರಮಪೂಜ್ಯ ಕಾರ್ಡಿನಲ್‌ ಮಾರ್‌ ಜಾರ್ಜ್‌ ಅಲೆಂಚೆರಿ, ಬೆಂಗಳೂರಿನ ಆರ್ಚ್‌ ಬಿಷಪ್‌ ಪರಮಪೂಜ್ಯ ಬರ್ನಾಡ್‌ ಮೊರಾಸ್‌, ದಿಲ್ಲಿಯ ಆರ್ಚ್‌ ಬಿಷಪ್‌ ಅನಿಲ್‌ ಕೌಟೋ, ಗೋವಾದ ಆರ್ಚ್‌ ಬಿಷಪ್‌ ಪಿಲಿಪ್‌ ನೆರಿ ಪೆರಾರೋ, ಬಿಷಪರಾದ ಅಜ್ಮಿàರ್‌ನ ಪಿಯೂಸ್‌ ಡಿ’ಸೋಜಾ, ಬರೇಲಿಯ ಇಗ್ನೇಷಿಯಸ್‌ ಡಿ’ಸೋಜಾ, ಬರೀಪುರ್‌ನ ಸಾಲ್ವದೋರ್‌ ಲೋಬೊ, ಜಬಲ್‌ಪುರ್‌ನ ಜೆರಾಲ್ಡ್‌ ಅಲ್ಮೇರಾ, ಕಣ್ಣೂರಿನ ಅಲೆಕ್ಸ್‌ ವಡಕುಮ¤ಲಾ, ಲಕ್ನೋ ಜೆರಾಲ್ಡ್‌ ಮಥಾಯಿಸ್‌, ಅತಿವಂದನೀಯ ಧರ್ಮಗುರುಗಳಾದ ಕೋಯಿಕೋಡ್‌ನ ವರ್ಗೀಸ್‌ ಚಕ್ಕಳಕಲ್‌, ಬೆಳಗಾವಿಯ ಪೀಟರ್‌ ಮಚಾದೋ, ಬೆಳ್ತಂಗಡಿಯ ಲಾರೆನ್ಸ್‌ ಮುಕ್ಕುಯಿ, ಚಿಕ್ಕಮಗಳೂರಿನ ಥೋಮಸಪ್ಪ ಎ. ಸ್ವಾಮಿ, ಗುಲ್ಬರ್ಗದ ರಾಬರ್ಟ್‌ ಎಂ. ಮಿರಾಂಡ, ಕಾರವಾರದ ಡೆರಿಕ್‌ ಫೆರ್ನಾಂಡಿಸ್‌, ಮಂಗಳೂರಿನ ಅಲೋಷಿಯಸ್‌ ಪೌಲ್‌ ಡಿ’ಸೋಜಾ, ಮಂಡ್ಯದ ಅಂತೋನಿ ಕರಿಯಿಲ್‌ ಸಿಎಂಐ, ಮೈಸೂರಿನ ಥೋಮಸ್‌ ಎ. ವಝಪಿಲೈ, ಪುತ್ತೂರಿನ ಗೀವರ್ಗೀಸ್‌ ಮರ್‌ ದಿವನ್ನಾಶಿಯಸ್‌, ಶಿವಮೊಗ್ಗದ ಫ್ರಾನ್ಸಿಸ್‌ ಸೆರಾವೋ ಎಸ್‌.ಜೆ., ಉಡುಪಿಯ ಜೆರಾಲ್ಡ್‌ ಐಸಾಕ್‌ ಲೋಬೋ, ಅತ್ತೂರು ಚರ್ಚ್‌ನ ನಿರ್ದೇಶಕ, ಧರ್ಮಗುರು ರೆ.ಫಾ. ಜೋರ್ಜ್‌ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English