ಮಂಗಳೂರು: ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಕರ್ನಾಟಕ ಬ್ಯಾಂಕ್ 2,490 ಕೋಟಿ ರೂ. ರಫ್ತು ಸಾಲದ ಗುರಿ ಮೀರುವ ವಿಶ್ವಾಸ ಹೊಂದಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ್ ಭಟ್ ಹೇಳಿದ್ದಾರೆ.
ಬ್ಯಾಂಕ್‌ನ ಮಂಗಳೂರು ಪ್ರಧಾನ ಕಚೇರಿಯಲ್ಲಿ ನಡೆದ ವಿದೇಶಿ ವಿನಿಮಯ ವಹಿವಾಟು ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ಸನ್ನಿವೇಶದಲ್ಲಿ ವಹಿವಾಟು ನಡೆಸಲು ಹೇರಳ ಅವಕಾಶವಿದೆ. ಅವುಗಳನ್ನು ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಮುಖ್ಯ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ, ಮಹಾಪ್ರಬಂಧಕರಾದ ರಘುರಾಮ, ಉಪೇಂದ್ರ ಪ್ರಭು, ಡಾ.ಮೀರಾ ಅರ್ಹಾನಾ, ರಾಘವೇಂದ್ರ ಭಟ್, ಚಂದ್ರಶೇಖರ ರಾವ್, ಸುಭಾಷ್ ಚಂದ್ರ ಪುರಾಣಿಕ್, ಡಿಜಿಎಂ ಮಹಾಬಲೇಶ್ವರ, ಹಿರಿಯ ಪ್ರಬಂಧಕ ಶ್ರೀನಿವಾಸ್ ದೇಶಪಾಂಡೆ ಮೊದಲಾದವರಿದ್ದರು.
Click this button or press Ctrl+G to toggle between Kannada and English