ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ 26/11 ಮುಂಬೈ ದಾಳಿಯ ಪ್ರಮುಖ ಉಗ್ರ ಅಬು ಜುಂದಾಲ್ ಸೇರಿ 7 ಮಂದಿ ಆರೋಪಿಗಳಿಗೆ ಮಹಾರಾಷ್ಟ್ರದ ವಿಶೇಷ ಮೋಕಾ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಮತ್ತಿಬ್ಬರು ದೋಷಿತರಿಗೆ 14 ವರ್ಷ ಹಾಗೂ ಉಳಿದ ಮೂವರಿಗೆ ಎಂಟು ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ 26/11 ಮುಂಬೈ ದಾಳಿಯ ಪ್ರಮುಖ ಉಗ್ರ ಅಬು ಜುಂದಾಲ್ ಸೇರಿ 12 ಆಪಾದಿತರನ್ನು ಮಹಾರಾಷ್ಟ್ರದ ವಿಶೇಷ ಮೋಕಾ ನ್ಯಾಯಾಲಯ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಪ್ರಕರಣದಲ್ಲಿ 8 ಜನ ಖುಲಾಸೆಯಾಗಿದ್ದರು.
2006ರ ಮೇ 8ರಂದು ಔರಂಗಾಬಾದ್‌ನಲ್ಲಿ ಮಹಾರಾಷ್ಟ್ರ ಎಟಿಎಸ್, ಟಾಟಾ ಸುಮೋ ಮತ್ತು ಇಂಡಿಕಾ ಕಾರನ್ನು ಬೆನ್ನತ್ತಿ ದಾಳಿ ನಡೆಸಿತ್ತು. ಆಗ ಈ ವಾಹನಗಳಲ್ಲಿ 3 ಶಂಕಿತ ಉಗ್ರರಿದ್ದರು. ಅವರ ಜತೆಗೆ 30 ಕೇಜಿ ಆರ್‌ಡಿಎಕ್ಸ್, 10 ಎ.ಕೆ.-47 ಬಂದೂಕುಗಳು ಮತ್ತು 3200 ಸುತ್ತು ಬುಲೆಟ್‌ಗಳು ಪತ್ತೆಯಾಗಿದ್ದವು. ಇಂಡಿಕಾ ಕಾರನ್ನು ಚಲಾಯಿಸುತ್ತಿದ್ದ ಜುಂದಾಲ್ ಪರಾರಿಯಾಗಿ ಆನಂತರ ಸೆರೆಸಿಕ್ಕಿದ್ದ.
ಈ ಸ್ಫೋಟಕಗಳನ್ನು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಕೊಲ್ಲಲು ಒಯ್ಯಲಾಗುತ್ತಿತ್ತು ಎಂದು ಎಟಿಎಸ್ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿತ್ತು. ಇದನ್ನು ನ್ಯಾಯಾಲಯ ಒಪ್ಪಿಕೊಂಡಿತ್ತು.
Click this button or press Ctrl+G to toggle between Kannada and English