ಸಾರ್ವಜನಿಕ ಜೀವನದಲ್ಲಿ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕೃತ್ಯಗಳು ನಡೆಯುವುದಿಲ್ಲ: ರವೀಶ್

9:38 AM, Thursday, August 4th, 2016
Share
1 Star2 Stars3 Stars4 Stars5 Stars
(No Ratings Yet)
Loading...

Polisಬಂಟ್ವಾಳ: ನಮ್ಮ ನಡೆ ನುಡಿಯ ಜೊತೆ ಸಾರ್ವಜನಿಕ ಜೀವನದಲ್ಲಿ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕೃತ್ಯಗಳು ನಡೆಯುವುದಿಲ್ಲ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ರವೀಶ್ ಹೇಳಿದರು.

ಅವರು ಬಂಟ್ವಾಳ ನಗರ ಠಾಣೆಯ ವತಿಯಿಂದ ಮೊಡಂಕಾಪು ಚರ್ಚ್ ಹಾಲ್‌ನಲ್ಲಿ ನಡೆದ ಮಕ್ಕಳ ಶೋಷಣೆ, ಲೈಂಗಿಕ ಶೋಷಣೆ ಮತ್ತು ಪೋಕ್ಸೊ ಕಾರ‍್ಯಗಾರ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನುಷ್ಯರಿಗೆ ಆಸೆ ಅತಿಯಾದಂತೆ ಕೆಟ್ಟ ಚಟಗಳಿಗೆ ದಾಸರಾಗುವುದು ಹೆಚ್ಚಾಗುತ್ತದೆ. ಹಾಗಾಗಿ ಮನುಷ್ಯ ಆಸೆಗಳನ್ನು ಇತಿಮಿತಿಯೊಳಗೆ ಇಟ್ಟುಕೊಂಡು ಬದುಕಬೇಕು. ಎಲ್ಲಾ ಮಕ್ಕಳನ್ನು ನಮ್ಮ ಮಕ್ಕಳಂತೆ ಭಾವಿಸಿ , ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಜೊತೆ ನಮ್ಮೆಲ್ಲರ ಪಾತ್ರ ಹೆಚ್ಚಿದೆ ಅದನ್ನು ಅರಿತುಕೊಂಡು ಮುನ್ನಡೆಯಿರಿ ಎಂದು ಹೇಳಿದರು.

Polisವೇದಿಕೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ , ಮೊಡಂಕಾಪು ಚರ್ಚ್‌ನ ಗುರುಗಳು ಕಿರಣ್ ಪಿಂಟೋ, ವೆಲೆರೋಡ್ ನಿರ್ದೇಶಕ ಸಂಪನ್ಮೂಲ ವ್ಯಕ್ತಿ ರೆನ್ನಿ ಡಿ.ಸೋಜ, ಬಂಟ್ವಾಳ ನಗರ ಠಾಣಾ ಎಸೈ ನಂದಕುಮಾರ್, ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಗೌಡ ಉಪಸ್ಥಿತರಿದ್ದರು. ಡಿಸಿಐಬಿ ಇನ್ಸ್‌ಪೆಕ್ಟರ್ ಅಮಾನುಲ್ಲಾಖಾನ್ ಸ್ವಾಗತಿಸಿ, ಟ್ರಾಫಿಕ್ ಎಸೈ ಚಂದ್ರಶೇಖರ್ ವಂದಿಸಿದರು. ಗುಪ್ತಚರ ಇಲಾಖೆಯ ಸಿಬ್ಬಂದಿ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.

Polis

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English