ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಗೆ ರಾಜ್ಯಸಭೆಯ ಅನುಮೋದನೆ

12:31 PM, Thursday, August 4th, 2016
Share
1 Star2 Stars3 Stars4 Stars5 Stars
(No Ratings Yet)
Loading...

GSTಹೊಸದಿಲ್ಲಿ: ಒಂದು ದೇಶ-ಒಂದೇ ರೀತಿಯ ತೆರಿಗೆ’ ಎಂಬ ಧ್ಯೇಯ ಹೊಂದಿರುವ “ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ’ಗೆ ಕೊನೆಗೂ ರಾಜ್ಯಸಭೆಯ ಅನುಮೋದನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಮಂಡಿಸಲಾದ ಐತಿಹಾಸಿಕ ಮಸೂದೆ ಕುರಿತು ಸತತ 7 ಗಂಟೆಗಳ ಚರ್ಚೆ ನಡೆದು, ಬಳಿಕ ಮಸೂದೆಯನ್ನು ಮತಕ್ಕೆ ಹಾಕಿದಾಗ, ಮಸೂದೆ ಪರ 203 ಮತ್ತು ವಿರುದ್ಧವಾಗಿ ಮತ ಚಲಾವಣೆಯಾದವು. ಈ ಮೂಲಕ ಮಸೂದೆಗೆ ಸದನವು ಬಹುಮತದ ಅನುಮೋದನೆ ನೀಡಿತು. ಮಸೂದೆಗೆ ಎಐಎಡಿಎಂಕೆ ಮಾತ್ರವೇ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕಾಂಗ್ರೆಸ್‌ ಕೂಡಾ ಬೆಂಬಲ ವ್ಯಕ್ತಪಡಿಸಿದ್ದರಿಂದ ಯಾವುದೇ ಅಡ್ಡಿ ಇಲ್ಲದೆ ಮಸೂದೆ ಅಂಗೀಕಾರ ಪಡೆದುಕೊಂಡಿತು.

ಇದರೊಂದಿಗೆ 16 ವರ್ಷಗಳ ಹಿಂದೆ ಕಂಡಿದ್ದ ಕನಸು ಸಾಕಾರ ರೂಪ ಕಂಡಿದ್ದು, ದೇಶದಲ್ಲಿ ಹೊಸ ತೆರಿಗೆ ವ್ಯವಸ್ಥೆ ಯುಗಾರಂಭವಾಗಿದೆ.

ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಈ ಮಸೂದೆಯನ್ನು ಈ ಹಿಂದೆಯೇ ಲೋಕಸಭೆ ಅಂಗೀಕರಿಸಿತ್ತಾದರೂ ಲೋಕಸಭೆಯ ಅಂಗೀಕಾರದ ಬಳಿಕ ಅದರಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಗುರುವಾರ ಮತ್ತೂಮ್ಮೆ ಲೋಕಸಭೆಯಲ್ಲಿ ಮಂಡಿಸಿ, ಅಲ್ಲಿ ಒಪ್ಪಿಗೆ ಪಡೆಯಲಾಗುವುದು. ಬಳಿಕ ದೇಶದ ಒಟ್ಟು ರಾಜ್ಯಗಳ ಪೈಕಿ ಕನಿಷ್ಠ ಅರ್ಧದಷ್ಟು ರಾಜ್ಯಗಳು ವಿಧಾನಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸ ಬೇಕು. ಈ ಪ್ರಕ್ರಿಯೆ ಮುಗಿದು, ಅದಕ್ಕೆ ರಾಷ್ಟ್ರಪತಿಗಳ ಸಹಿ ಬಿದ್ದ ಬಳಿಕ ದೇಶದಲ್ಲಿ ಸರಳೀಕೃತ ತೆರಿಗೆ ವ್ಯವಸ್ಥೆ ಎಂದೇ ಹೇಳಲಾದ ಜಿಎಸ್‌ಟಿ ಜಾರಿಗೆ ಬರಲಿದೆ.

ಜಿಎಸ್‌ಟಿ ಜಾರಿಗೆ ಪ್ರಮುಖ ಅಡ್ಡಿಯಾಗಿದ್ದ, ಜಿಎಸ್‌ಟಿ ದರದ ಕುರಿತು ಸರಕಾರದ ಯಾವುದೇ ಖಚಿತ ಮಾಹಿತಿ ನೀಡಿಲ್ಲವಾದರೂ, ಅದನ್ನು ವಿಪಕ್ಷಗಳ ಬೇಡಿಕೆಯಂತೆ ಆದಷ್ಟು ಕನಿಷ್ಠ ಪ್ರಮಾಣದಲ್ಲಿ ಇಡುವ ಭರವಸೆ ನೀಡಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಹಿತ ಬಹುತೇಕ ಎಲ್ಲ ಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದವು. ಸಹಕರಿಸಿದ ಎಲ್ಲರಿಗೂ ಮೋದಿ ಧನ್ಯವಾದ ಹೇಳಿದ್ದಾರೆ.

ಜಿಎಸ್‌ಟಿ ಜಾರಿ ಲಾಭ ಏನು?
ಸದ್ಯ ದೇಶದಲ್ಲಿ ಸರಕು ಮತ್ತು ಸೇವೆಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳು 10ಕ್ಕೂ ಹೆಚ್ಚು ರೀತಿಯ ತೆರಿಗೆ ಹಾಕುತ್ತಿವೆ. ಜಿಎಸ್‌ಟಿ ಜಾರಿ ಬಂದ ಬಳಿಕ ಈ ಎಲ್ಲ ಪರೋಕ್ಷ ತೆರಿಗೆ ರದ್ದಾಗಿ, ಕೇವಲ ಕೇಂದ್ರ ಜಿಎಸ್‌ಟಿ ಮತ್ತು ರಾಜ್ಯ ಜಿಎಸ್‌ಟಿ ಮಾತ್ರ ಹೇರಿಕೆಯಾಗಲಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English