ಪಾಲಿಕೆಯಲ್ಲಿ ಖಾಲಿಯಿರುವ ಹುದ್ದೆಗಳು ತುಂಬಲು ಕ್ರಮ: ರೋಶನ್ ಬೇಗ್

9:51 AM, Friday, August 5th, 2016
Share
1 Star2 Stars3 Stars4 Stars5 Stars
(No Ratings Yet)
Loading...

MCCಮಂಗಳೂರು: ಪಾಲಿಕೆಯ 1,725 ಮಂಜೂರು ಹುದ್ದೆಗಳಲ್ಲಿ ಪ್ರಸ್ತುತ ಕೇವಲ 548 ಹುದ್ದೆಗಳು ಮಾತ್ರ ಇವೆ. ಉಪ ಆಯುಕ್ತರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಖಾಲಿಯಿದ್ದು, ಕೆಪಿಎಸ್‌ಸಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಇದು ಪೂರ್ಣಗೊಂಡ ಕೂಡಲೇ ತೆರವಾಗಿರುವ ಹುದ್ದೆಗಳು ಭರ್ತಿಯಾಗಲಿವೆ ಎಂದು ಸಚಿವ ಆರ್.ರೋಶನ್ ಬೇಗ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ, ಸುರತ್ಕಲ್ ಹಾಗೂ ಲಾಲ್‌ಬಾಗ್‌ನಲ್ಲಿ ಮಂಜೂರಾಗಿರುವ ವಲಯ ಕಚೇರಿಗಳನ್ನು ಶೀಘ್ರವೇ ಆರಂಭಿಸುವಂತೆ ಸಚಿವರು ಆದೇಶಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ, ಕಾಲುದಾರಿ ಪಾರ್ಕಿಂಗ್ ಮೊದಲಾದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಗಮನ ಸೆಳೆದಿದ್ದಾರೆ. ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ದೀರ್ಘಾವದಿ ಹಾಗೂ ಕಿರು ಅವಧಿಯ ಸಮಸ್ಯೆಗಳೆಂದು ವಿಭಾಗಿಸಿ ಆದ್ಯತೆಯ ನೆಲೆಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

MCCಮೇಯರ್ ಹರಿನಾಥ್ ಪಾಲಿಕೆಯಲ್ಲಿ ಸಿಬ್ಬಂದಿ ಸಮಸ್ಯೆ, ನೂತನ ವೆಂಟೆಡ್ ಡ್ಯಾಂ ನೀರು ನಿಲುಗಡೆಗೆ ಭೂಸ್ವಾಧೀನದ ಅವಶ್ಯಕತೆಯ ಬಗ್ಗೆ ಸಚಿವರ ಬಳಿ ಅಹವಾಲು ಮಂಡಿಸಿದರು.

ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಲ್ಯಾನ್ಸ್ಲಾಟ್ ಪಿಂಟೋ, ಬಶೀರ್, ಅಪ್ಪಿ, ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರ ಹಾಗೂ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ನವೀನ್ ಡಿಸೋಜ, ಮೊಹಮ್ಮದ್, ರಾಧಾಕೃಷ್ಣ, ಪ್ರತಿಭಾ ಕುಳಾಯಿ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

MCC

MCC-4

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English