ಮಂಜೇಶ್ವರ: ಕರ್ನಾಟಕದಲ್ಲಿ ವ್ಯಾಸಂಗ ಮಾಡುವ ಕಾಸರಗೋಡಿನ ಗಡಿನಾಡ ಕನ್ನಡಿಗರಿಗೆ ಹಾಸ್ಟೆಲ್ ಸೌಲಭ್ಯ ಇದೀಗ ಮೊಟಕುಗೊಂಡಿದ್ದು, ಅದನ್ನು ಮರುಸ್ಥಾಪಿಸುವಂತೆ ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿ.ರಮಾನಾಥ ರೈಯವರಿಗೆ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮನವಿ ಸಲ್ಲಿಸಿದರು.
2016-17ರ ಶೈಕ್ಷಣಿಕ ವರ್ಷದಲ್ಲಿ ಹಾಸ್ಟೆಲ್ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಇದರಿಂದಾಗಿ ಕಾಸರಗೋಡಿನ ಗಡಿನಾಡ ಕನ್ನಡಿಗರು ಈ ಅವಕಾಶದಿಂದ ವಂಚಿತರಾಗಿದ್ದಾರೆ.
ಇತ್ತಿಚಿನವರೆಗೂ ಕಾಸರಗೋಡಿನ ಕನ್ನಡಿಗರಿಗೆ ಹಾಸ್ಟೆಲ್ ಪ್ರವೇಶಾತಿ ದೊರೆಯುತ್ತಿದ್ದು, ಇದೀಗ ಆನ್‌ಲೈನ್ ವ್ಯವಸ್ತೆ ಜ್ಯಾರಿಗೆ ಬಂದಿದ್ದು, ಇದರಲ್ಲಿ ಕಾಸರಗೋಡಿನ ಕನ್ನಡಿಗರಿಗೆ ಯಾವುದೇ ಕಲಂ ಇಲ್ಲದ ಹಿನ್ನೆಲೆಯಲ್ಲಿ ನೂತನವಾಗಿ ಹಾಸ್ಟೆಲ್ ಸೇರ್ಪಡೆಗೊಳ್ಳಲು ಗಡಿನಾಡ ಕನ್ನಡಿಗರಿಗೆ ಅಸಾದ್ಯವಾಗಿದೆ.ಜೊತೆಗೆ ಗಡಿನಾಡ ಕನ್ನಡಿಗರಿಗೆ ಯಾವುದೇ ಮೀಸಲಾತಿಯನ್ನು ಏರ್ಪಡಿಸಲಾಗಿಲ್ಲ.
ಈ ಬಗ್ಗೆ ಈಗಾಗಲೇ ಕರ್ನಾಟಕದ ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್.ಆಂಜನೇಯರವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಇದೀಗ ಸರಕಾರ ಗಮನಹರಿಸಬೇಕೆಂದು ಒತ್ತಾಯಿಸಿ ರಮಾನಾಥ ರೈಯವರಿಗೂ ಮನವಿಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಶ್ರಮಿಸುವುದಾಗಿ ರಮಾನಾಥ ರೈಯವರು ಭರವಸೆ ನೀಡಿದ್ದಾರೆ.
Click this button or press Ctrl+G to toggle between Kannada and English