ಮಂಗಳೂರು: ತುಳುವರ ಆಟಿ ಅಮಾವಾಸ್ಯೆ ಕಳೆದು ಬರುವುದೇ ನಾಗರ ಪಂಚಮಿ ಹಬ್ಬ. ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಬರುವ ಈ ಹಬ್ಬ, ಕೆಲವೊಮ್ಮೆ ಸೋನೆ ತಿಂಗಳಿನಲ್ಲಿ ಬರುವುದೂ ಇದೆ. ಅದೆನೇ ಆದರೂ ಆ ಬಳಿಕ ಬರುವ ಹಬ್ಬಗಳು ಸಾಲು ಸಾಲಾಗಿ ನಾಡಿಗೆ ಸಂಭ್ರಮ ತರಲಿವೆ.
ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಸ್ಥಾನವಿದೆ. ನಾಗ ಪಂಚಮಿ ನಾಗಾರಾಧನೆಗೆ ಸಂಬಂಧಿಸಿದ ವಿಶಿಷ್ಟ ದಿನದಂದು ತುಳು ನಾಡಿನ ಉದ್ದಗಲಕ್ಕೂ ಎಲ್ಲಾ ಜಾತಿ-ಜನಾಂಗದವರೂ ನಾಗನಿಗೆ ಹಾಲೆರೆಯುತ್ತಾರೆ. ತುಳುನಾಡಿನ ಅಲ್ಲಲ್ಲಿ ನಾಗಂಡಗಳಿವೆ. ಅಂದರೆ ಇದರ ಅರ್ಥ ನಾಗನಿಗೆ ಸಂಬಂಧಿಸಿದ ಗದ್ದೆಗಳಿವೆ.
ತುಳುನಾಡಿನಲ್ಲಿ ನಾಗನನ್ನು ಸುಬ್ರಾಯ ಎಂದೂ ಹೆಸರಿಸಲಾಗಿದೆ. ನಾಗನಿಗೂ ನೀರಿಗೂ ಹತ್ತಿರದ ನಂಟು. ಹುತ್ತ ಇದ್ದಲ್ಲಿ ನೀರಿನ ಸಾನ್ನಿಧ್ಯ ಎಂದು ಜಾನಪದರು ಊಹಿಸಿದ್ದಾರೆ.
ಪರಶುರಾಮ ಸೃಷ್ಟಿಯ ಸಪ್ತ ಮಹಾ ಕ್ಷೇತ್ರಗಳಲ್ಲಿ ಕುಡುಪು ನಾಗದೇವಾಲಯ, ಕುಕ್ಕೆಯ ಸುಬ್ರಮಣ್ಯ ಕ್ಷೇತ್ರ ಹಾಗೂ ಹಾಗೂ ವಿವಿಧ ದೇವಸ್ಥಾನಗಳಲ್ಲೂ ನಾಡಿನ ವಿವಿಧೆಡೆಯಿಂದ ಭಕ್ತರು ಬಂದು ನಾಗನಿಗೆ ಹಾಲು, ಎಳನೀರು ಎರೆದು ಪೂಜೆ ಸಲ್ಲಿಸಿದರು.
Click this button or press Ctrl+G to toggle between Kannada and English