ಬಂಟ್ವಾಳ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪೋಲೀಸರು ತಮ್ಮ ಮನಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಕುಟುಂಬದವರೊಂದಿಗೂ ಬೆರೆಯುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ರವೀಶ್ ಹೇಳಿದರು.
ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡಿ ವಿವಿಧ ಠಾಣೆಗಳಿಗೆ ಮುಂಬಡ್ತಿಗೊಂಡು ವರ್ಗಾವಣೆಯಾದ ಸಿಬ್ಬಂದಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲಾಖೆಯಲ್ಲಿ ಸಮಯ ಮತ್ತು ಅವಕಾಶಗಳು ಎಂದು ಕೇಳಿಕೊಂಡು ಬರುವುದಿಲ್ಲ, ಅವಕಾಶಗಳು ಸಿಕ್ಕಾಗ ಅದನ್ನು ಜಾಣ್ಮೆಯಿಂದ ಉಪಯೋಗಿಕೊಳ್ಳುವುದೇ ನಮ್ಮ ಕರ್ತವ್ಯ ಎಂದು ಹೇಳಿದರು. ಕೆಲಸ ಮಾಡಲು ಹುದ್ದೆ ಮುಖ್ಯವಲ್ಲ, ಕೆಲಸದಲ್ಲಿ ಯಶಸ್ಸು ಗಳಿಸುವುದು ಮುಖ್ಯ ಹಾಗಾಗಿ ನಮ್ಮೊಳಗಿನ ಕೀಳರಿಮೆ ಬಿಟ್ಟು ಗೌರವದಿಂದ ಕೆಲಸ ಮಾಡಿ ಎಂದು ಹೇಳಿದರು.
ವೇದಿಕೆಯಲ್ಲಿ ನಗರ ಠಾಣಾ ಎಸ್.ಐ. ನಂದಕುಮಾರ್ ಉಪಸ್ಥಿತರಿದ್ದರು. ಎ.ಎಸ್.ಐ ಆಗಿ ಮುಂಬಡ್ತಿಗೊಂಡು ವರ್ಗಾಣೆಯಾದ ರಘುರಾಮ ಹೆಗ್ಡೆ , ಎ.ಎಸ್.ಐ. ಮಾದವ ಮತ್ತು ಹೆಡ್ ಕಾನ್ಸ್‌ಟೇಬಲ್ ಆಗಿ ಮುಂಬಡ್ತಿಗೊಂಡು ವರ್ಗಾವಣೆಯಾದ ಲಕ್ಷಣ್ ಮತ್ತು ಮಾದವ ಅವರ ಬೀಳ್ಕೊಡುಗೆ ಕಾರ‍್ಯಕ್ರಮ ನಡೆಯಿತು. ಗ್ರಾಮಾಂತರ ಠಾಣಾ ಎಸ್.ಐ.ರಕ್ಷಿತ್ ಗೌಡ ಸ್ವಾಗತಿಸಿ, ಎ.ಎಸ್.ಐ ರಮೇಶ್ ವಂದಿಸಿದರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English