ಕಾಸರಗೋಡು/ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಹಲವೆಡೆ ಭಾನುವಾರ ನಾಗರಪಂಚಮಿ ಆಚರಣೆಯ ಸಂಭ್ರಮ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು.
ಬೆಳಗ್ಗಿನಿಂದಲೇ ವಿವಿಧ ನಾಗ ದೇವಾಲಯಗಳಲ್ಲಿ ಭಕ್ತರು ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು.
ಹದಿನೆಂಟು ಪೇಟೆಗೊಳಪಟ್ಟ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ, ಬಂಗ್ರ ಮಂಜೆಶ್ವರದ ಶ್ರೀ ಕಾಳಿಕಾ ಪರಮೆಶ್ವರಿ ದೇವಸ್ಥಾನ, ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನ, ಉಪ್ಪಳದ ಕೋಡಿಬೈಲು ತರವಾಡು ಮನೆ, ಕುಂಬಳೆಯ ಕಳತ್ತೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಾಸರಗೋಡು ನಗರದ ಮಲ್ಲಿಕಾರ್ಜುನ ಕ್ಷೇತ್ರ ಮುಂಬಾಗವಿರುವ ನಾಗನ ಕಟ್ಟೆ, ರಾಜ್ಯ ಸಾರಿಗೆ ಬಸ್ಸು ನಿಲ್ದಾಣ ಸಮೀಪವಿರುವ ನಾಗನ ಕಟ್ಟೆ,ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನ,ನೀರ್ಚಾಲು ಸಮೀಪದ ಬೇಳ ಕುಮಾರಮಂಗಲ ಕುಮಾರ ಸುಬ್ರಹ್ಮಣ್ಯ ಕ್ಷೇತ್ರ ಮೊದಲಾದೆಡೆ ತನು ಅರ್ಪಿಸಿ ಸತೃಪ್ತರಾದರು. ನಾಗಬನಗಳಲ್ಲಿ ಪೂಜೆಗಳು ಶಾಂತರೀತಿಯಲ್ಲಿ ನಡೆದವು.
ನಾಗರ ಪಂಚಮಿ ಭಾನುವಾರ ವಾಗಿರುವುದರಿಂದ ಹಬ್ಬ ಆಚರಣೆಯಲ್ಲಿ ಹೆಚ್ಚಿನ ಜನರು ಪಾಲ್ಗೊಂಡಿರುವುದು ಕಂಡು ಬಂದಿದೆ. ಉದ್ಯಾವರ ಶ್ರೀಮದ್ ಅನಂತೇಶ್ವರ ದೇವಳದಲ್ಲಿ ಬೆಳಗ್ಗೆಯೇ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ನಾಗರ ಪಂಚಮಿ ಆಚರಿಸಿದರು.
Click this button or press Ctrl+G to toggle between Kannada and English