ಸರಕಾರದ ಆದೇಶದಂತೆ ಶೀಘ್ರದಲ್ಲೇ ಖಾಸಗಿ ಬಸ್ಸ್ ದರ ಏರಿಕೆ : ಜಿಲ್ಲಾಧಿಕಾರಿ

7:06 PM, Saturday, July 16th, 2011
Share
1 Star2 Stars3 Stars4 Stars5 Stars
(No Ratings Yet)
Loading...

Bus Meeting/ಬಸ್ಸ್ ದರ ಏರಿಕೆಮಂಗಳೂರು : ಖಾಸಗಿ ಬಸ್ ಮಾಲೀಕರು ಇತ್ತೀಚಿನ ದಿನಗಳಲ್ಲಿ ಇಂಧನ, ವಾಹನದ ಬಿಡಿಭಾಗಗಳ ಬೆಲೆ ಏರುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣದರ ಏರಿಸಬೇಕು ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಏರಿಕೆಯ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಅವರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು ಬಸ್ ಪ್ರಯಾಣದರ ನಿಗಧಿಗೆ ಸರಕಾರದ ಮಾರ್ಗದರ್ಶನದಂತೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಸಾರ್ವಜನಿಕರ ಹಾಗೂ ಖಾಸಗಿ ಬಸ್ ಮಾಲೀಕರ ಅಹವಾಲು ಸ್ವೀಕರಿಸಿ ನಂತರ ಪರಿಶೀಲನೆ ನಡೆಸಿದ ನಂತರ ವರದಿಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ ಈಗಾಗಲೇ ಎಲ್ಲಾ ದರಗಳು ಏರಿಕೆಯಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಕಡಿಮೆ ಸಂಬಳದಲ್ಲಿ ದುಡಿಯುವ ಕಾರ್ಮಿಕರು ದರ ಏರಿಕೆಯಿಂದ ತೀರಾ ಕಂಗಾಲಾಗುತ್ತಾರೆ, ಬಸ್ಸಿನಲ್ಲಿ ಪ್ರಯಣಿಸದೆ ನಡೆದು ಹೋಗ ಬೇಕಾದ ಪರಿಸ್ಥಿತಿ ಬರಬಹುದು ಎಂದು ಅಭಿಪ್ರಾಯ ಮಂಡಿಸಿದರು. ಆದುದರಿಂದ ಖಾಸಗಿ ಪ್ರಯಾಣ ದರವನ್ನು ಏರಿಕೆ ಮಾಡಬಾರದಾಗಿ ಸಭೆಯಲ್ಲಿ ವಿನಂತಿಸಿದರು. ಖಾಸಗಿ ಬಸ್ಸು ಗಳ ಪರವಾನಿಗೆಯನ್ನು ರದ್ದು ಪಡಿಸಿ ಸರಕಾರೀ ಬಸ್ಸು ಗಳ ಸಂಚಾರ ಆರಂಭಿಸುವಂತೆ ಪ್ರಾಧಿಕಾರದವರಲ್ಲಿ ಮನವಿ ಮಾಡಿದರುಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಮಾತನಾಡಿ ಬಸ್ ಪ್ರಯಾಣದರವನ್ನು ಕನಿಷ್ಠ 0-50 ಪೈಸೆಗಳನ್ನು ಮೊದಲ 4 ಸ್ಟೇಜ್ ಗಳ ತನಕ ಹಾಗೂ ನಂತರದ ಸ್ಟೇಜ್ ಗಳಿಗೆ ರೂ.1.00 ಕನಿಷ್ಠ ಏರಿಕೆ ಮಾಡುವಂತೆ ವಿನಂತಿಸಿದರು. ಪ್ರತೀ ಕಿಲೋಮೀಟರ್ ಗೆ ತಮಗೆ ತಗಲುವ ವೆಚ್ಚ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಪ್ರಯಾಣ ದರ ಏರಿಕೆ ಮಾಡದ ಹೊರತು ತಮಗೆ ನಷ್ಠವುಂಟಾಗಲಿದೆಯೆಂದರು.

ಸಾರ್ವಜನಿಕರ ಹಾಗೂ ಖಾಸಗಿ ಬಸ್ ಮಾಲೀಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಮತ್ತೊಂದು ಬಾರಿ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಮಲ್ಲಿಕಾರ್ಜುನ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಶ್ರೀ ಲಾಬುರಾಂ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English