ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಅಧಾರ್ ಕಾರ್ಡ್ ಬಿಡುಗಡೆ

6:55 PM, Tuesday, July 19th, 2011
Share
1 Star2 Stars3 Stars4 Stars5 Stars
(No Ratings Yet)
Loading...

Udupi Adhar card/ಉಡುಪಿಯಲ್ಲಿ ಆಧಾರ್ ಕಾರ್ಡ್ ಬಿಡುಗಡೆಉಡುಪಿ : ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಜಾರಿಗೆಗೊಳಿಸಿದ ಅಧಾರ್ ಕಾರ್ಡ್ ವಿತರಣೆಯನ್ನು ಜಿಲ್ಲಾಧಿಕಾರಿ ಟಿ‌.ಎಮ್ ರೇಜು  ನೆರವೇರಿಸಿದರು. ಪ್ರಥಮ ಆಧಾರ್ ಕಾರ್ಡ್ ನ್ನು ಜಿಲ್ಲಾಧಿಕಾರಿ ಟಿ‌.ಎಮ್ ರೇಜು ಅವರು ಲಯನ್ಸ್ ಗವರ್ನರ್ ಪಿಹೆಚ್ ಆಫ್ ಜಯಕರ ಶೆಟ್ಟಿ ಇಂದ್ರಾಳಿ ಯವರಿಗೆ ಹಸ್ತಾಂತರಿಸುವುದರ ಮೂಲಕ ಬಿಡುಗಡೆಗೊಳಿಸಿದರು. ಆಧಾರ್ ಕಾರ್ಡ್ ನಿಂದ ಸಾಕಷ್ಟು ಪ್ರಯೋಜನಕಾರಿಯಾಗಿದ್ದು ಕಂದಾಯ ಇಲಾಖೆಯ ಸಂಬಂಧ ಪಟ್ಟ ತೊಂದರೆಗಳನ್ನು ಈ ಕಾರ್ಡ್ ನಿಂದ ಬಗೆಹರಿಸಬಹುದಾಗಿದೆ. ಈ ಆಧಾರ್ ಕಾರ್ಡ್ ನ ವಿತರಣೆ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದು ಸುಮಾರು 1 ಲಕ್ಷ ಕಾರ್ಡ್ ನಷ್ಟು ವಿತರಿಸಲಾಗಿದೆ ಎಂದು ರೇಜು ತಿಳಿಸಿದರು.

ರಾಜ್ಯ ಸರಕಾರದ ಈ ಯೋಜನೆಯನ್ನು ಹಂತ-ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಟಾನಗೊಳ್ಳುತ್ತಿದ್ದು ಈಗ ಉಡುಪಿಯ ಪ್ರಧಾನ ಅಂಚೆ ಕಚೇರಿಯಲ್ಲಿ ವಿತರಿಸಲಾಗುತ್ತಿದೆ, ಮುಂದೆ ಜಿಲ್ಲೆಯ ಎಲ್ಲಾ ವಿಭಾಗೀಯ ಅಂಚೆ ಕಚೇರಿಯಲ್ಲಿ ವಿತರಿಸಲಾಗುವುದು. ಅಕ್ಟೋಬರ್ ತಿಂಗಳ ವೇಳೆ ಇಡೀ ದೇಶದಲ್ಲಿ 1ಮಿಲಿಯನ್ ಆಧಾರ್ ಕಾರ್ಡ್ ನ್ನು  ವಿತರಿಸುವ ಕೆಲಸ ಸರ್ಕಾರ ತಯಾರಿ ನಡೆಸುತ್ತಿದೆ ಎಂದರು.

 

ಸಮಾರಂಭದಲ್ಲಿ ಅಂಚೆ ವಿಭಾಗದ ಅಧೀಕ್ಷಕ ರಾಜಶೇಖರ್ ಭಟ್ ಹಾಗೂ ಪೋಸ್ಟ್ ಮಾಸ್ಟರ್ ಕಿರಣ್ ಕುಮಾರ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English