’ದಬಕ್ ದಬಾ ಐಸಾ’ ಗಳಿಕೆಯಲ್ಲಿ ಹೊಸದಾಖಲೆ: ಪ್ರಥಮ ವಾರದಲ್ಲಿ 12 ಥಿಯೇಟರ್‌ಗಳಲ್ಲಿ 371 ಪ್ರದರ್ಶನ

10:56 AM, Saturday, August 13th, 2016
Share
1 Star2 Stars3 Stars4 Stars5 Stars
(No Ratings Yet)
Loading...

Dabak daba isaಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ ’ದಬಕ್ ದಬಾ ಐಸಾ’ ಸಿನಿಮಾವು ಪ್ರಥಮ ವಾರದಲ್ಲಿ ಒಟ್ಟು 12 ಥಿಯೇಟರ್‌ಗಳಲ್ಲಿ 50,26,357 ಲಕ್ಷ.ರೂ.ಗಳಿಸುವ ಮೂಲಕ ತುಳು ಸಿನಿಮಾರಂಗದಲ್ಲಿ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.

ಪ್ರಥಮ ವಾರದಲ್ಲಿ ಒಟ್ಟು 12 ಥಿಯೇಟರ್‌ಗಳಲ್ಲಿ 371 ಪ್ರದರ್ಶನಗಳನ್ನು ಕಂಡಿರುವ ’ದಬಕ್ ದಬಾ ಐಸಾ’ ಸಿನಿಮಾವು ಜಯಕಿರಣ ಫಿಲಂಸ್‌ನ ಮೊದಲ ’ಚಾಲಿಪೋಲಿಲು’ ಸಿನಿಮಾದ 45 ಲಕ್ಷದ ಗಳಿಕೆಯನ್ನು ಹಿಂದಿಕ್ಕಿದೆ.

ಸಿನಿಮಾರಂಗದ ಇತಿಹಾಸದಲ್ಲೇ ವಾರದ ಗಳಿಕೆಯಲ್ಲಿ ’ದಬಕ್ ದಬಾ ಐಸಾ’ ಸಿನಿಮಾವು ಹೊಸ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಯ ಎರಡು ವಾರದ ಮೊದಲೇ ಸಿನಿಮಾ ಸೋರಿಕೆಯಾಗಿ ಮೊಬೈಲ್‌ಗಳಲ್ಲಿ ಹರಿದಾಡುತ್ತಿದ್ದರೂ ಪ್ರೇಕ್ಷಕರು ಥಿಯೇಟರ್‌ಗೆ ಆಗಮಿಸಿ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಿರುವುದಕ್ಕೆ ಚಿತ್ರದ ನಿರ್ಮಾಪಕ – ನಿರ್ದೇಶಕ ಪ್ರಕಾಶ್‌ಪಾಂಡೇಶ್ವರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸಿನಿಮಾದಲ್ಲಿ ಹಳೇ ಮುಖಗಳನ್ನೇ ಬಳಸಲಾಗಿದೆ ಮತ್ತು ಸಿನಿಮಾದ ಕುರಿತು ಅನಗತ್ಯ ಅಪಪ್ರಚಾರ ಮಾಡುವವರಿಗೆ ಪ್ರೇಕ್ಷಕರೇ ’ದಬಕ್ ದಬಾ ಐಸಾ’ ಸಿನಿಮಾದ ಮೂಲಕ ಉತ್ತರ ನೀಡಿದ್ದಾರೆ.

Dabak daba isaಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ ರೈ ಮಂದಾರ, ಲಕ್ಷ್ಮಣ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಶೀತಲ್ ನಾಯಕ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಉತ್ಪಲ್ ನಯನಾರ್ ಛಾಯಗ್ರಾಹಣ ನೀಡಿದ್ದು, ರಾಜೇಶ್ ಮಂಗಳೂರು ಸಂಗೀತ ನೀಡಿದ್ದಾರೆ. ನವೀನ್ ಡಿ. ಪಡೀಲ್ ಸಿನಿಮಾದಲ್ಲಿ ಪ್ರಬುದ್ಧ ನಟನೆಯ ಮೂಲಕ ಜನರನ್ನು ರಂಜಿಸುವುದರ ಜೊತೆಗೆ ಅಳಿಸಿದ್ದಾರೆ. ಅವರ ಪಾತ್ರದ ಬಗ್ಗೆ ವ್ಯಾಪಕ ಪ್ರ್ರಶಂಸೆಯ ಮಾತುಗಳು ಬಂದಿವೆ ಎಂದು ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.

ಪಡೀಲ್ ಪಾತ್ರ ಪರಕಾಯ ಪ್ರವೇಶ
ಚಿತ್ರದ ಕ್ಲೈಮಾಕ್ಸ್ ಸನ್ನಿವೇಶದಲ್ಲಿ ಜೈಲಿನಲ್ಲಿ ನಡೆಯುವ ಸಂಭಾಷಣೆಯಲ್ಲಿ ಪಡೀಲ್ ಅವರದು ಅದ್ಬುತ ನಟನೆ. ಒಂದೊಂದು ಡೈಲಾಗ್ ಹೇಳುವಲ್ಲೂ, ಪೆಟ್ಟು ತಿಂದು ನಡೆಯಲಾಗದ ಸ್ಥಿತಿಯಲ್ಲಿ ಇರುವಂತೆ ಅವರು ಅಭಿನಯಿಸಿದ ರೀತಿಯಲ್ಲೂ ಪಡೀಲ್‌ಗೆ ಪಡೀಲೇ ಸಾಟಿ. ಮಾತ ಆಯಿನಿ ಈ ಕಾಕಜಿರ್ದ್… ನಿನ್ನ ಕೈ ಪತ್ತ್‌ದ್ ನಿನ್ನೊಟ್ಟಿಗೆ ಬದ್‌ಕೊಡ್ ಪಂದ್ ಎನಿದಿತ್ತೆ… ಈ ಡೈಲಾಗ್ ಹೇಳುವಲ್ಲೂ, ಬೊಕ ನಿಕ್ಕ್ ಎಂಚ ಗೊತ್ತಾಪಿನಿ ಪಾಪ… ಎಂಬ ಡೈಲಾಗ್ ಹೇಳುವಲ್ಲೂ ಅವರೆಷ್ಟು ತನ್ಮಯತೆಯಿಂದ ನಟಿಸಿದ್ದಾರೆ ಎಂಬುದು ತಿಳಿಯಬಹುದು.

Dabak daba isa

Dabak daba isa

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English